ಕರಾವಳಿ

ರೈತರ ವೇಷ ಧರಿಸಿ ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ: ಸಂಸದ ಬಿ.ವೈ ರಾಘವೇಂದ್ರ ಆರೋಪ

Pinterest LinkedIn Tumblr

ಕುಂದಾಪುರ: ರೈತರ ಹಿತವನ್ನು ಎಂದಿಗೂ ಚಿಂತನೆ ಮಾಡದ ಕೆಲ ಸಂಘಟನೆಗಳು ರೈತರ ವೇಷ ಧರಿಸಿಕೊಂಡು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ರೈತ ಮಸೂದೆ ಕಾಯ್ದೆಯ ವಿರುದ್ದ ಪ್ರಚೋದಿತ ಹೋರಾಟವನ್ನು ನಡೆಸುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಆರೋಪಿಸಿದರು.

ಅವರು ಮಂಗಳವಾರ ತಾಲೂಕಿನ ಸಿದ್ದಾಪುರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೈತರು ಈ ದೇಶದ ಬೆನ್ನಲುಬು. ಅವರ ಹಿತ ಕಾಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಒಂದು ಮಸೂದೆಯನ್ನು ಜಾರಿ ಮಾಡಬೇಕಾದರೆ ಅದರ ಹಿಂದಿರುವ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ತಜÐರ ಸಲಹೆ ಪಡೆದು ಮಾಡಬೇಕಾಗುತ್ತದೆ. ಈ ಮಸೂದೆಯನ್ನು ಐದಾರು ವರ್ಷಗಳ ಹಿಂದೆಯೇ ಚರ್ಚಿಸಿ ತೀರ್ಮಾನಿಸಲಾಗಿತ್ತು. ಈ ಕಾಯ್ದೆಯಿಂದ ರೈತರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಬಂದಾಗ ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ. ರೈತರ ಹಿತಕಾಯದ ವಿರೋಧಪಕ್ಷಗಳು ಉದ್ದೇಶಪೂರಕವಾಗಿಯೇ ರೈತರನ್ನು ಕೇಂದ್ರ ಸರ್ಕಾರದ ವಿರುದ್ದ ಎತ್ತಿಕಟ್ಟುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿರೋಧಪಕ್ಷಗಳ ಷಡ್ಯಂತರದ ಭಾಗವಾಗಿದೆ. ಕೇಂದ್ರ ರ್ಕಾರ ರೈತರ ಪರವಾಗಿದೆ ಎಂದರು.

ಕೊಲ್ಲೂರು ರೋಪ್‍ವೇ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದ ಬಿವೈ ರಾಘವೇಂದ್ರ, ಶಿಮ್ಲಾ, ಹಿಮಾಚಲದಲ್ಲಿ ರೋಪ್ ವೇ ಮೂಲಕ ಪ್ರವಾಸೋದ್ಯಮ ಕ್ಷೇತ್ರಗಳು ತುಂಬಾ ಅಭಿವೃದ್ದಿಯಾಗಿದೆ. ರೋಪ್ ವೇ ಬಗ್ಗೆ ವಿರೋಧ ಬರುವುದು ಸಹಜ. ಪರಿಸರ ಉಳಿಯಬೇಕು ಎಂಬ ಸಲಹೆಗಳನ್ನು ಕೆಲವರು ಕೊಡುತ್ತಿದ್ದಾರೆ. ಅವರೆಲ್ಲರ ಸಲಹೆಗಳನ್ನು ತೆಗೆದುಕೊಂಡು ಪರಿಸರವನ್ನು ನಾಶಪಡಿಸದೆ ಪರಿಸರಸ್ನೇಹಿಯಾಗಿ ಎಲ್ಲರ ವಿಶ್ವಾಸವನ್ನು ಗಳಿಸಿ ಮುಂದುವರೆಯುತ್ತೇವೆ ಎಂದರು.

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸಚಿವ ಸ್ಥಾನ ದೊಡ್ಡ ಹುದ್ದೆ. ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ಇಲ್ಲ. ಇದು ಪ್ರಧಾನಿಯವರು ಹಾಗೂ ಪಕ್ಷದ ಮುಖಂಡರ ತೀರ್ಮಾನ. ನನಗಿಂತಲೂ ಹಿರಿಯರು, ಅನಿಭವಿಗಳು ಹಲವರಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಆ ದಿನಗಳು ಆದಷ್ಟು ಬೇಗ ಬರಲಿ ಎಂದು ಸಚಿವ ಸ್ಥಾನದ ಬಗ್ಗೆ ಸಂಸದ ಬಿವೈ ರಾಘವೇಂದ್ರ ಅವರು ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಮುಖಂಡರಾದ ಕಿರಣ್ ಕೊಡ್ಗಿ, ಜಯರಾಮ್ ಭಂಡಾರಿ, ಬಾಲಚಂದ್ರ ಭಟ್, ಶರತ್ ಶೆಟ್ಟಿ ಉಪ್ಪುಂದ ಮೊದಲಾದವರು ಇದ್ದರು.

Comments are closed.