ಕರಾವಳಿ

ಸಾಧಕ ವಿಧ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದ ಸಾಧಕರಿಗೆ ಪ್ರತಿಭಾ ಪುರಸ್ಕಾರ

Pinterest LinkedIn Tumblr

ಮಂಗಳೂರು : ರಾಗ ತರಂಗ ( ರಿ) ಮಂಗಳೂರು ಇದರ ವತಿಯಿಂದ 2020- 21 ರ ಸಾಲಿನ ಸದಸ್ಯರ ಪದಗ್ರಹಣ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾಯ೯ಕ್ರಮ ಇತ್ತೀಚೆಗೆ ನಡೆಯಿತು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಇಂಜಿನಿಯರಿಂಗ್ ಸಂಗೀತ ,ಭರತನಾಟ್ಯ ,ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದ 15 ಮಕ್ಕಳನ್ನು ಪುರಸ್ಕರಿಸಲಾಯಿತು.

ಶ್ರೀ ಚಿತ್ತರಂಜನ್ ಬೋಳಾರ್, ಶ್ರೀ ಎಂ. ಬಿ. ಪುರಾಣಿಕ್ ಮತ್ತು ಶ್ರೀದೇವಪ್ರಸಾದ್ ಪುನರೂರು ಮುಖ್ಯ ಅತಿಥಿಗಳಾಗಿದ್ದರು . ಡಾ। ದೇವರಾಜ್ ಕೆ ಅವರು ಸಂಸ್ಥೆಯ ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.

ಶ್ರೀ ಚಿತ್ತರಂಜನ್ ಬೋಳಾರ್ ಅವರು ತಮ್ಮ ಅತಿಥಿ ಭಾಷಣದಲ್ಲಿ ಕಳೆದ 36 ವರುಷಗಳಿಂದ ಅತ್ಯುತ್ತಮವಾಗಿ ಮಕ್ಕಳ ಪ್ರತಿಭೆಗಳನ್ನು ಪೋಷಿಸುತ್ತಿರುವ ರಾಗತರಂಗದ ಸಾಧನೆಯನ್ನು ಶ್ಲಾಘಿಸಿದರು.

ಶ್ರೀ ಅನಂತಕೃಷ್ಣ ಉಡುಪ ಮತ್ತು ಶ್ರೀಮತಿ ಜ್ಯೋತಿ ಉಡುಪ ಅವರು ಉಪಸ್ಥಿತರಿದ್ದರು .ಸಂಸ್ಥೆಯ ಅಧ್ಯಕ್ಷ ವಾಮನ್ ಬಿ ಮೈಂದನ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಶ್ರೀಮತಿ ಮಮತಾ ರಾಜೀವ್ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀ ಸುರೇಂದ್ರ ಶೆಣೈ ವಂದಿಸಿದರು.

Comments are closed.