ಕರಾವಳಿ

ಸೈನಿಕರಿಗೆ ಮಾಸ್ಕ್ ತಯಾರಿಸಿ ಕಳಿಸಿದ ಉಡುಪಿ ವಿದ್ಯಾರ್ಥಿನಿಗೆ ರಕ್ಷಣಾ ಸಚಿವರಿಂದ ಶ್ಲಾಘನೆ..!

Pinterest LinkedIn Tumblr

ಉಡುಪಿ: ಮಹಾಮಾರಿ ಕೊರೋನಾದಿಂದ ನಮ್ಮ ದೇಶವನ್ನು ಕಾಯುವ ಸೈನಿಕರ ಆರೋಗ್ಯ ರಕ್ಷಣೆಗಾಗಿ ಮಾಸ್ಕ್‌ಗಳನ್ನು ತಯಾರಿಸಿ ಕಳುಹಿಸಿದ ಉಡುಪಿಯ ವಿದ್ಯಾರ್ಥಿನಿಯೊಬ್ಬಳ ಕಾಳಜಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಶ್ಲಾಘಿಸಿದ್ದಾರೆ.

ಉಡುಪಿ ಜಿಲ್ಲೆ ಮಣಿಪಾಲ ಮಾಧವ ಕೃಪಾ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಇಶಿತಾ ಆಚಾರ್‌ ಲಾಕ್‌ಡೌನ್‌ ಸಂದರ್ಭದಲ್ಲಿ ತಾನು ಮನೆಯಲ್ಲಿಯೇ ಹೊಲಿದ 300 ಮಾಸ್ಕ್‌ಗಳನ್ನು ಯೋಧರಿಗೆ ಕಳುಹಿಸಿದ್ದಳು.

ಶಾಲೆಯಲ್ಲಿ ಸ್ಕೌಟ್‌ ಶಿಕ್ಷಕರು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡುವುದಕ್ಕಾಗಿ ಮಾಸ್ಕ್‌ ತಯಾರಿಸುವಂತೆ ಹೇಳಿದ್ದು ಇಶಿತಾ ಆಚಾರ್‌ ಮಾಸ್ಕ್‌ಗಳನ್ನು ತಯಾರಿಸಿ ನೀಡಿದ್ದಲ್ಲದೆ ಮತ್ತಷ್ಟು ಮಾಸ್ಕ್‌ ತಯಾರಿಸಿ ಸೈನಿಕರಿಗೆ ನೀಡಿದ್ದಾಳೆ‌

ಮಾಸ್ಕ್‌ಗಳನ್ನು ಅರ್ಹರಿಗೆ ನೀಡಬೇಕು ಎಂದು ಯೋಚಿಸಿದ್ದು ಸೈನಿಕರಿಗೆ ನೀಡಿ ಎಂದು ಆತ್ಮೀಯರು ಸಲಹೆ ಮಾಡಿದರು. ಆದರೆ ಪೂರಕ ವಿಳಾಸ ಇರಲಿಲ್ಲ, ಇಂಟರ್‌ ನೆಟ್‌ನಲ್ಲಿ ಹುಡುಕಿದಾಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಕಚೇರಿ ವಿಳಾಸ ಸಿಕ್ಕಿತು. ಅದಕ್ಕೆ 300 ಮಾಸ್ಕ್‌ಗಳನ್ನು ಕೊರಿಯರ್‌ ಮಾಡಿದ್ದು ನಂತರದಲ್ಲಿ ಅವರ ಪತ್ರ ಬಂದಿದ್ದು ನೋಡಿ ಸಂತಸವಾಗಿದೆ ಎಂದು ಇಶಿತಾ ಹೇಳುತ್ತಾರೆ.

Comments are closed.