ಕರಾವಳಿ

ನಾವು ವಿಶ್ವ ಕನ್ನಡಿಗರು ( ಅಮೆರಿಕಾ) ಆಯೋಜಿಸಿರುವ ನಾವಿಕೋತ್ಸವ ಕಥಾ ಸ್ಪರ್ಧೆ ಯಲ್ಲಿ ಹೇಮಾ ಸದಾನಂದ ಅಮೀನ್ ಅವರಿಗೆ ಪ್ರಥಮ ಬಹುಮಾನ

Pinterest LinkedIn Tumblr

ಮುಂಬಯಿ : ಮುಂಬಯಿಯ ಬರಹಗಾರ್ತಿ ಹೇಮಾ ಸದಾನಂದ ಅಮೀನ್ ಮುಂಬಯಿ ಇವರಿಗೆ ಅಮೇರಿಕಾದ ನಾವಿಕ ಸಂಸ್ಥೆ ನಡೆಸಿದ ಕರ್ನಾಟಕದ ಕನ್ನಡಿಗರಿಗಾಗಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ತಮ್ಮ ಚಿಲ್ಡ. ಬಿಯರ್ ಕಥೆಗೆ ಪ್ರಥಮ ಬಹುಮಾನ ದೊರಕಿರುವುದು.

ಭಾರತದಲ್ಲಿನ ಬರಹಗಾರರಿಗೆಂದೇ ಆಯೋಜಿಸಿದ್ದ ಈ ಸ್ಪರ್ಧೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು , ಕರ್ನಾಟಕದ ಕನ್ನಡಿಗರು, ಮುಂಬೈ ಕನ್ನಡಿಗರು ನಮಗೆ ಬಹಳಷ್ಟು ಕಥೆಗಳನ್ನು ಬರೆದು ಕಳಿಸಿದ್ದರು. ನಾವು ಮೊದಲೆರಡು ಸುತ್ತಿನ ಕಥೆಗಳನ್ನು ಆರಿಸಿ, ಅಂತಿಮ ಸುತ್ತಿಗೆ ಏಳು ಕಥೆಗಳನ್ನು ಆರಿಸಿದ್ದೆವು. ಮೂರು ಬಹುಮಾನಿತ ಕಥೆಗಳನ್ನು ಅಮೆರಿಕಾದಲ್ಲಿ ವೈದ್ಯರಾಗಿ ನೆಲೆಸಿರುವ, ಯಶಸ್ವಿ ಬರಹಗಾರರಾಗಿ ಗುರುತಿಸಿಕೊಂಡಿರುವ,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ.ಗುರುಪ್ರಸಾದ ಕಾಗಿನೆಲೆ ಅವರು ಆಯ್ಕೆ ಮಾಡಿದ್ದಾರೆ.

ಮೊದಲ ಬಹುಮಾನ – ’ಚಿಲ್ಡ ಬಿಯರ್’ – ಕಥೆಗಾರ್ತಿ : ಹೇಮಾ ಅಮೀನ್ ( ಮುಂಬಯಿ )

ಎರಡನೆ ಬಹುಮಾನ -’ ಪೃಥಾಸಿತೆ’ – ಕಥೆಗಾರ್ತಿ : ಸಂಧ್ಯಾ ಹೆಗಡೆ ( ಬೆಂಗಳೂರು )

ಮೂರನೇ ಬಹುಮಾನ : ’ಉತ್ತರಾಧಿಕಾರಿ -ಕಥೆಗಾರ್ತಿ : ಶ್ರೀರಂಜನಿ ಅಡಿಗ (ಬೆಂಗಳೂರು )

ನಿರ್ಣಾಯಕರಾಗಿ ಡಾ.ಗುರುಪ್ರಸಾದ ಕಾಗಿನೆಲೆಯವರು ಬಹುಮಾನಿತ ಕಥೆಗಳ ಕುರಿತು ತಮ್ಮ ವಿಮರ್ಶಾತ್ಮಕ ಕಥಾನುಭವವನ್ನು ನಾವಿಕ ತಂಡದವರಿಗೆ ತಿಳಿಸಿದ್ದಾರೆ ಎಂದು ಹಾಗೂ ನಾವಿಕ ಕಥಾಸ್ಪರ್ಧೆಯ ವಿವರಗಳನ್ನು ನೀಡಿ , ವಿಜೇತರ ಹೆಸರನ್ನು ’ನಾವಿಕೋತ್ಸವ’ ಅಂತರ್ಜಾಲ ಸಮ್ಮೇಳನದಲ್ಲಿ ಕಳೆದ ವಾರ ಘೋಷಿಸಿಲಾಗಿದೆ.

ನಾವಿಕೋತ್ಸವ ಇ-ಸ್ಮರಣ ಸಂಚಿಕೆಯಲ್ಲಿ ಬಹುಮಾನಿತ ಕಥೆಗಳನ್ನೂ ಪ್ರಕಟಿಸಲಾಗಿದ್ದು ಲಿಂಕನ್ನು ಕಳುಹಿಸಲಾಗಿದೆ ಎಂದು ನಾವಿಕೋತ್ಸವ ಕಥಾ ತಂಡದವರು ತಿಳಿಸಿದ್ದಾರೆ.

ಹೇಮಾ ಅವರ ಅವರೆಲ್ಲ ದೇವರಾಗಿದ್ದಾರೆ ಕಥಾ ಸಂಕಲನಕ್ಕೆ ಡಾ ವಿಶ್ವೇಶ್ವರಯ್ಯ ಇಂಜಿನೀಯರಿಂಗ್
ಪ್ರತಿಷ್ಠಾನದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಹಾಗೂ ತಮ್ಮ *ಕಲ್ಯಾಣಿಯಲ್ಲಿ ಮಳೆ*  ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ರೋಣ – ಗಜೇಂದ್ರಗಡ್ ಘಟಕದ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರ ಕಥೆ ಕವನ ವೈಚಾರಿಕ ಲೇಖನ ಮತ್ತು ವಿವಿಧ ಪ್ರಕಾರಗಳ ಬರಹಗಳು ಕರ್ನಾಟಕ , ಮುಂಬಯಿ ಸಹಿತ ಅನೇಕ ಮಾಸಿಕ, ದೈನಿಕಾದಿ ಪ್ರತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇವೆ.

ಹೇಮಾ ಅವರು ಓರ್ವ ಸೃಜನಶೀಲ ಬಹುಮುಖ ಪ್ರತಿಭೆಯಾಗಿದ್ದು, ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡ.ಎಂ ಏ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅತ್ತ್ಯುತ್ತಮ ಸಂಘಟಕಿಯಾಗಿ ವಿದ್ಯಾಧರ ಕನ್ನಡ ಪ್ರತಿಷ್ಠಾನ (ಧಾರವಾಡ – ಮುಂಬಯಿ) ಸಂಚಾಲಕಿಯಾಗಿದ್ದಾರೆ .

ಸೃಜನಾ ಮುಂಬಯಿ ಲೇಖಕಿಯರ ಸಂಘ ದಲ್ಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳ ಸದಸ್ಯೆಯಾಗಿದ್ದಾರೆ.

ತೀಯಾ ಸಮಾಜದ ಮುಖವಾಣಿಯಲ್ಲಿ ಸಲಹಾ ಸಂಪಾದಕಿಯಾಗಿದ್ದ ಹೇಮಾ ಅವರ ನಿಯತ ಅಂಕಣ ಬರಹಗಳೂ ಬಂದಿರುವುದು.

ಕಥಾ ಸ್ಪರ್ಧೆ ಆಯೋಜನೆ ಮಾಡಿದ ಅಮೇರಿಕಾದ ನಾವಿಕ (ನಾವು ವಿಶ್ವ ಕನ್ನಡಿಗರು)ಸಂಸ್ಥೆಯವರಿಗೂ, ಬಹುಮಾನ ಪಡೆದ ಮೂವರು ಮಹಿಳೆಯರಿಗೂ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಬಳಗದವರೂ ಹಾಗೂ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿಯವರು ಅಭಿನಂದಿಸುತ್ತಾ ಒಳ – ಹೊರನಾಡಿನ ಕನ್ನಡದ ಸೇತುವೆ ಯಾದ ಹೇಮಾರ ಕನ್ನಡ ಸಾಹಿತ್ಯ ಸೇವೆ ಅನುಪಮವಾದದ್ದು, ಅವರಿಂದ ಇನ್ನೂ ಹೆಚ್ಚೆಚ್ಚು ಬರಹಗಳು ಮೌಲಿಕವಾಗಿ, ಸಮಾಜಪರವಾಗಿ. ಬರಹಗಳು ಬರಲೆಂದು ಹಾರೈಸಿದ್ದಾರೆ.

 

Comments are closed.