ಕರಾವಳಿ

ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲಿ ನಾವು ಸಫಲರಾಗಿದ್ದೇವೆ : ತೋನ್ಸೆ ಜಯಕೃಷ್ಣ ಎ. ಶೆಟ್ಟಿ

Pinterest LinkedIn Tumblr

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಸಂಸ್ಥಾಪನಾ ದಿನಾಚರಣೆ ನಿಮಿತ್ತ ವಿಡಿಯೋ ಕಾನ್ಫರೆನ್ಸ್ ಸಭೆ

ಮುಂಬಯಿ : ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 20 ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ಮುಂಬಯಿಯ ಹಾಗೂ ಕರಾವಳಿಯ ವಿವಿಧ ಸಮಾಜದ ಪ್ರಮುಖರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ಸೆ. 5ರಂದು ನಡೆಯಿತು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರೂ, ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮುಂಬಯಿ ಹಾಗೂ ಕರಾವಳಿಯ ಸುಮಾರು 50 ಕ್ಕೂ ಮಿಕ್ಕಿ ತುಳು ಕನ್ನಡಿಗ ಗಣ್ಯ ವ್ಯಕ್ತಿಗಳು ಬಾಗವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಎಲ್ಲರನ್ನೂ ಸ್ವಾಗತಿಸಿದರು.

ಸಮಿತಿಯ ಉಪಾಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಕಳೆದ 20 ವರ್ಷಗಳ ಸಾಧನೆ ಮತ್ತು ಚಟುವಟಿಕೆಗಳ ಬಗ್ಗೆ ಅಚ್ಚುಕಟ್ಟಾಗಿ ವಿವರವನ್ನು ನೀಡುತ್ತಾ ಸಮಿತಿ ಯ ಯಶಸ್ವಿಗೆ ಸಹಕರಿಸಿದ ಗಣ್ಯರನ್ನು ಸ್ಮರಿಸಿದರು.

ಸಮಿತಿಯ ಮಾಜಿ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ಅಡ್ವೋಕೇಟ್ ಪ್ರಕಾಶ್ ಎಲ್. ಶೆಟ್ಟಿ ಯವರು ಮಾತನಾಡುತ್ತಾ ಜಿಲ್ಲೆಗಳ ಪ್ರಗತಿಗೆ ನಾವೆಲ್ಲರೂ ಸೇರಿದ್ದೇವೆ. ವಿವಿಧ ಜಾತಿ ಧರ್ಮರು ಈ ಸಮಿತಿಯಲ್ಲಿ ಸಕ್ರಿಯರಾಗಿದ್ದು ಜಿಲ್ಲೆಯ ವಿವಿಧ ಸಮಸ್ಯೆಗಳಿಸಿ ಸ್ಪಂದಿಸುತ್ತಿರುವರು. ಜಿಲ್ಲೆಗಳ ಹಲವಾರು ಯೋಜನೆ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದರೂ ಇನ್ನೂ ಹಲವಾರು ಕೆಲಸಗಳು ಬಾಕಿ ಉಳಿದಿದೆ. ನಮಗೆ ಪ್ರಾರಂಭದಿಂದಲೂ ಸಹಕರಿಸಿದ ಕೇಂದ್ರ ಸರಕಾರದ ಮಾಜಿ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು.

ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಅಡ್ವೋಕೇಟ್ ಸುಭಾಷ್ ಶೆಟ್ಟಿ ಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿ ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಜಯಕೃಷ್ಣ ಶೆಟ್ಟಿ ಯವರ ನೇತೃತ್ವದಲ್ಲಿ ಮಾಡಿದ ಸಾಧನೆಯನ್ನು ತಿಳಿಸುತ್ತಾ ಸಮಿತಿಯ ಮುಂದಿನ ಎಲ್ಲಾ ಯೋಜನೆಗೆ ನಿಮ್ಮೊಂದಿಗೆ ನಾನು ಕೈಜೋಡಿಸುವೆನು ಎಂದರು.

ಉದ್ಯಮಿ ಬಿ. ವಿವೇಕ್ ಶೆಟ್ಟಿಯವರು ಮಾತನಾಡಿ ಕೊರೋನಾ ಮಹಾಮಾರಿಯಿಂದಾಗಿ ಕಳೆದ ಆರು ತಿಂಗಳ ನಂತರ ನಾವೆಲ್ಲರೂ ಸಂಪರ್ಕದಲ್ಲಿರುವುದನ್ನು ನೋಡಿ ಸಂತೋಷವಾಗಿದೆ. 20 ವರ್ಷಗಳನ್ನು ಪೂರೈಸಿದ ಸಮಿತಿಗೆ ಅಭಿನಂದನೆ ವ್ಯಕ್ತಪಡಿಸುತ್ತಾ ಕೋರೋನಾದಿಂದಾಗಿ ಇದೀಗ ನಮ್ಮ ಜಿಲ್ಲೆಯು ಮಾಲೀನ್ಯ ರಹಿತ ವಾಗಿದ್ದು ದೇವರು ನಮಗೆ ಇದನ್ನು ಕಲ್ಪಿಸಿದ್ದಾರೆ ಹಾಗೂ ಕೋರೋನಾ ನಂತರ ಸ್ವಚ್ಚತೆ ಬಗ್ಗೆ ಉತ್ತಮ ಬದಲಾವಣೆಯಾಗಲಿದೆ ಎಂದರು.

ಇದಲ್ಲದೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ ಯು. ದೇವಾಡಿಗ, ಸಮಿತಿಯ ಮಾಜಿ ಕೋಶಾಧಿಕಾರಿ ಹಾಗೂ ಹಾಲಿ ಉಪಾಧ್ಯಕ್ಷ ಸಿ ಎ ಐ ಆರ್ ಶೆಟ್ಟಿ, ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರುಗಳಾದ ಎಲ್ ವಿ ಅಮೀನ್, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್ ದೇವಾಡಿಗ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್ ಎಮ್ ಭಂಡಾರಿ, ನ್ಯಾಯವಾದಿ ಗುಣಕರ ಶೆಟ್ಟಿ, ವಿದ್ಯಾದಾಯಿನಿ ಸಭಾದ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ ಎಮ್ . ಕೋಟ್ಯಾನ್, ಗಾಣಿಗ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಣಿಗ, ರವಿರಾಜ್ ಕಲ್ಯಾಣಪುರ್, ಬಿಲ್ಲವರ ಅಸೋಸಿಯೇಷನ್ ಸ್ಥಳೀಯ ಸಮಿತಿ ಕಾರ್ಯಾಕ್ಷರಾದ ಎಮ್ ಎನ್ ಕರ್ಕೇರ, ವಿಶ್ವಕರ್ಮ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಜಿ ಟಿ ಆಚಾರ್ಯ, ಬಿ ರಮಾನಂದ ರಾವ್, ಹಿರಿಯ ಪತ್ರಕರ್ತ ದಯಾಸಾಗರ ಚೌಟ, ರತ್ನಾಕರ್ ಶೆಟ್ಟಿ, ರಂಜಿನಿ ಮೊಯಿಲಿ, ಪ್ರೊಫೆಸರ್ ಶಂಕರ್ ಉಡುಪಿ ಮೊದಲಾದವರು ಮಾತನಾಡಿ 20 ವರ್ಷಗಳನ್ನು ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಪೂರೈಸಿದ ಸಮಿತಿಗೆ ಅಭಿನಂದನೆ ಸಲ್ಲಿಸಿದರಲ್ಲದೆ ಸಮಿತಿಯ ಎಲ್ಲಾ ಕಾರ್ಯಗಳಿಗೆ ಸಹಕರಿಸಿದವರನ್ನು ಸ್ಮರಿಸುತ್ತಾ ಸಮಿತಿಯ ಮುಂದಿನ ಯೋಜನೆಗಳಿಗೆ ಕ್ರೀಯಾಶೀಲವಾಗೋಣ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮಾತನಾಡುತ್ತಾ ಕಳೆದ 20 ವರ್ಷಗಳಿಂದ ಸಮಿತಿಯ ಎಲ್ಲಾ ಕಾರ್ಯಗಳಿಗೆ ಸಹಕರಿಸಿದ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.

ನಮ್ಮ ಸಮಿತಿಗೆ ಯುವ ಜನಾಂಗದ ಅಗತ್ಯವಿದ್ದು ಯುವಕರನ್ನು ಅಧಿಕ ಸಂಖ್ಯೆಯಲ್ಲಿ ಸೇರಿಸಬೇಕಾಗಿದೆ. ನಮಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದ ಜಾರ್ಜ್ ಫೆರ್ನಾಂಡೀಸ್ ಮತ್ತು ವಿಶ್ವೇಶತೀರ್ಥ ಸ್ವಾಮೀಜಿ, ನಮ್ಮನ್ನು ಪ್ರೋತ್ಸಾಹಿಸುತ್ತಿರುವ ವಿವಿಧ ಸಮುದಾಯದ ಮುಖಂಡರುಗಳು, ಸಮಿತಿಯ ಮಾಜಿ ಹಾಗೂ ಹಾಲಿ ಕಾರ್ಯಕರ್ತರು ಹಾಗೂ ನಿಮ್ಮೆಲ್ಲರ ಸಹಕಾರದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸು ವಲ್ಲಿ ನಾವು ಸಫಲರಾಗಿದ್ದೇವೆ. ಮುಂದೆ ಸಮಿತಿಯ ವೈಬ್ ಸೈಟನ್ನು ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆ ಮಾಡಲಿರುವೆವು ಅಲ್ಲದೆ ಕೋರೋನಾದ ನಂತರ ಡಿಸೆಂಬರ ಯಾ ಜನವರಿ 202ರಲ್ಲಿ ಸಮಿತಿಯ 20ನೇ ಸಂಸ್ಥಾಪನಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.

ಸಭೆಯಲ್ಲಿ ಮಹೇಂದ್ರ ಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಪಿ ಧನಂಜಯ ಶೆಟ್ಟಿ, ಸುರೇಂದ್ರ ಮೆಂಡನ್, ಉಮೇಶ್ ಕೆ. ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಭೆಯನ್ನು ಜಾಲತಾಣ ದಲ್ಲಿ ಜರಗಿಸಲು ತೇಜಸ್ವಿ ಶಂಕರ್ ಉಡುಪಿ ಸಹಕರಿಸಿದ್ದು, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸರು ಸಭೆಯನ್ನು ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್ ವಂದನಾರ್ಪಣೆ ಮಾಡಿದರು.

ವರದಿ : ಈಶ್ವರ ಎಂ. ಐಲ್ / ದಿನೇಶ್ ಕುಲಾಲ್

Comments are closed.