
ಮಂಗಳೂರು, ಸೆಪ್ಟೆಂಬರ್ 03: ಮಾಜಿ ಇಮಿಗ್ರೇಷನ್ ಅಧಿಕಾರಿ ಮತ್ತು ಪ್ರಸ್ತುತ ಬಂದರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ ದಿನೇಶ್ (44) ಅವರು ಸೆಪ್ಟೆಂಬರ್ 3ರ ಗುರುವಾರ ಹೃದಯಘಾತದಿಂದ ನಿಧನರಾದರು.
ಲಾಕ್ ಡೌನ್ ಆದೇಶ ಬಂದ ಸಂದರ್ಭದಲ್ಲಿ ಅವರಿಗೆ ಮೊದಲ ಸಲ ಹೃದಯಘಾತವಾಗಿದ್ದು, ಬಳಿಕ ಈ ವರೆಗೆ ಅವರು ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ. ಇಂದು ಮತ್ತೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೃತರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ (ವಲಸೆ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭ ಉತ್ತಮ ಸೇವಾ ದಾಖಲೆ ಹೊಂದಿದ್ದರು. ಬಂದರ್ ಪೊಲೀಸ್ ಠಾಣೆಗೆ ವರ್ಗಾವಣೆಯಾದ ನಂತರ ಅವರು ತಮ್ಮ ಸ್ನೇಹಪರ ಸ್ವಭಾವ ಮತ್ತು ಸಾಮಾಜಿಕ ಸೇವೆಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿತ್ತು.
ಮೃತರು ನಗರದಲ್ಲಿ ಅತ್ಯಂತ ಜನರ ಸ್ನೇಹಿ ಪೊಲೀಸ್ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಇವರ ಕರ್ತವ್ಯ ಹಾಗೂ ಕಾರ್ಯ ದಕ್ಷತೆಯಿಂದ ತಮ್ಮ ಮೇಲಾಧಿಕಾರಿಗಳಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.
Comments are closed.