ಕರಾವಳಿ

ದುಬಾರಿ ಗಿಫ್ಟ್ ಹೆಸರಲ್ಲಿ ಕಾರ್ಕಳದ ಮಹಿಳೆಗೆ 3 ಲಕ್ಷದ 90 ಸಾವಿರ ವಂಚನೆ!

Pinterest LinkedIn Tumblr

ಉಡುಪಿ: ದುಬಾರಿ ಗಿಫ್ಟ್ ಕೊಡುವುದಗಿ ನಂಬಿಸಿ ಬ್ಯಾಂಕ್ ಮೂಲಕ ಹಣಪಡೆದು ವಂಚಿಸಿದ ಮತ್ತೊಂದು ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಕಾರ್ಕಳದ ಅಜೆಕಾರು ಮೂಲದ ಮಹಿಳೆ ಮೋಸಗೊಂಡವರಾಗಿದ್ದು 3,90,000 ಹಣ ಕಳೆದುಕೊಂಡಿದ್ದಾರೆ.

ದೂರುದಾರ ಮಹಿಳೆಗೆ ಫೇಸ್ ಬುಕ್ ನಲ್ಲಿ ಡಾ. ಲಿವೀಸ್ ಎಂಬ ಮಹಿಳೆ ಆಗಸ್ಟ್ 4 ರಂದು ಪರಿಚಯವಾಗಿದ್ದು ತಾನು ತನ್ನ ಹುಟ್ಟು ಹಬ್ಬಕ್ಕೆ ಬೆಲೆ ಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ನಂಬಿಸಿದ್ದು ಅದರಂತೆ ದೆಹಲಿಯಿಂದ ಪಾರ್ಸೆಲ್ ಆಪೀಸ್ ನಿಂದ ಎಂದು ಕರೆ ಮಾಡಿ ಬೆಲೆ ಯು.ಕೆ ಯಿಂದ ಬಾಳುವ ಪಾರ್ಸೆಲ್ ಬಂದಿದ್ದು ಅದನ್ನು ಕಳುಹಿಸಬೇಕಾದರೆ ರೂಪಾಯಿ 35 ಸಾವಿರ ಕಟ್ಟ ಬೇಕಾಗಿ ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದನ್ನು ನಂಬಿದ ಮಹಿಳೆ ಆ ಖಾತೆಗೆ ಹಣವನ್ನು ವರ್ಗಾಯಿಸಿದ್ದರು. ಬಳಿಕ ಆಗಸ್ಟ್ 11ರಂದು ಕರೆ ಮಾಡಿ ಪಾರ್ಸೆಲ್ ನಲ್ಲಿ ಪೌಂಡ್ ಇದೆ ಅದಕ್ಕೆ ದಾಖಲೆ ಮಾಡಬೇಕಾದರೆ ರೂಪಾಯಿ 95 ಸಾವಿರ ಹಣವನ್ನು ಕಟ್ಟಬೇಕು ಎಂದು ಹೇಳಿದಂತೆ ಮತ್ತೆ 95,000/- ಹಣವನ್ನು ಹೇಳಿದ ಖಾತೆಗೆ ಜಮಾ ಮಾಡಿದ್ದರು. ನಂತರ ರಿಸರ್ವ್ ಬ್ಯಾಂಕ್ ನಿಂದ ಎಂದು ಕರೆ ಮಾಡಿ ಕ್ಲಿಯರೆನ್ಸ್ ಬಗ್ಗೆ ಹಣ ಕಟ್ಟಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ ಜಮಾ ಮಾಡಿದ್ದು, ನಂತರ ಯು.ಕೆ ಫೌಂಡನ್ನು ಇಂಡಿಯಾದ ರೂಪಾಯಿಗೆ ವರ್ಗಾಯಿಸಲು ರೂಪಾಯಿ 2 ಲಕ್ಷದ 60 ಸಾವಿರ ಹಣ ಕಟ್ಟಬೇಕೆಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ ಆ ಹಣವನ್ನು ಜಮಾ ಮಾಡಿದ್ದರು. ಆರೋಪಿಯು ಮಹಿಳೆಯಿಂದ 3 ಲಕ್ಷದ 90 ಸಾವಿರ ಹಣವನ್ನು ಮೋಸದಿಂದ ಬ್ಯಾಂಕ್ ಮೂಲಕ ಪಡೆದು, ಪಾರ್ಸೆಲ್ ಕಳುಹಿಸದೇ, ಹಣವನ್ನು ವಾಪಾಸು ನೀಡದೆ ಮೋಸ ಮಾಡಿದ್ದಾರೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ-

ಫೇಸ್ಬುಕ್ಕಿನಲ್ಲಿ ಪರಿಚಯವಾದ ಮಹಿಳೆ- ಗಿಫ್ಟ್ ಹೆಸರಲ್ಲಿ ಉಡುಪಿಯ ವ್ಯಕ್ತಿಗೆ 3.5 ಲಕ್ಷ ಪಂಗನಾಮ!

Comments are closed.