
ಶಿಮಂತೂರು ನಾರಾಯಣ ಶೆಟ್ಟಿ
ಮಂಗಳೂರು: ‘ಯಕ್ಷಗಾನ ಛಂದೋಬ್ರಹ್ಮ’, ‘ಅಭಿನವ ನಾಗವರ್ಮ’ ಬಿರುದಾಂಕಿತ ಹಿರಿಯ ವಿದ್ವಾಂಸ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ ನಿಧನ ಯಕ್ಷಗಾನ ಛಂದಸ್ಸು ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶಿಮಂತೂರು ನಾರಾಯಣ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಿಕರಿಗೆ, ಶಿಷ್ಯರಿಗೆ ಭಗವಂತ ಕರುಣಿಸಲಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಾಗಿ, ಯಕ್ಷಗಾನ ಛಂದಸ್ಸು ಕ್ಷೇತ್ರದ ಸಾಧಕನಾಗಿ, ಕವಿ, ವಿಮರ್ಶಕ, ಪ್ರಸಂಗಕರ್ತರಾಗಿ ಸಾಹಿತ್ಯ, ಯಕ್ಷಗಾನ ಕ್ಷೇತ್ರಕ್ಕೆ ನಾರಾಯಣ ಶೆಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ.

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು
ಯಕ್ಷಗಾನ ಛಂದೋಂಬುಧಿ ಎನ್ನುವ ತನ್ನ ಗ್ರಂಥದ ಮೂಲಕ ಶಿಮಂತೂರು ಅವರು ಅಜರಾಮರರಾಗಲಿ ದ್ದಾರೆ.
‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವನ್ನು ಎಳವೆಯಲ್ಲಿಯೇ ರಚಿಸುವ ಮೂಲಕ ಶಿಮಂತೂರು ಅವರು ಪ್ರಖ್ಯಾತಿ ಪಡೆದವರು. ಅವರ ಅಗಲಿಕೆ ದುಖಃ ಉಂಟು ಮಾಡಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
Comments are closed.