ಕರಾವಳಿ

ಮಂಗಳೂರು ಪದವು ಸೆಂಟ್ರಲ್ ವಾರ್ಡ್‌ನ 76 ಕುಟುಂಬಗಳಿಗೆ “ಹಕ್ಕುಪತ್ರ ವಿತರಣೆ”

Pinterest LinkedIn Tumblr

ಮಂಗಳೂರು : ಪದವು ಸೆಂಟ್ರಲ್ ವಾರ್ಡ್ ನ ನಿವಾಸಿಗಳಿಗೆ “ಹಕ್ಕುಪತ್ರ ವಿತರಣೆ” ಕಾರ್ಯಕ್ರಮವು ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಪದವು ಸೆಂಟ್ರಲ್ ವಾರ್ಡ್ ನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು. ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ, ಮ.ನ. ಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಮನಪಾ ಅಧಿಕಾರಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ. ಶಕ್ತಿನಗರದ ರಾಜೀವನಗರದಲ್ಲಿ ಸುಮಾರು 25 ವರ್ಷಗಳಿಂದ ಬಾಕಿಯುಳಿದಿದ್ದ ಹಕ್ಕುಪತ್ರಗಳನ್ನು ವಿತರಿಸಲಾಯಿತು. ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭ ಸ್ಥಳೀಯರು ಹಕ್ಕುಪತ್ರಕ್ಕಾಗಿ ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ನನ್ನ ಅವಧಿಯಲ್ಲೇ ಹಕ್ಕುಪತ್ರ ನೀಡುವ‌ಭರವಸೆ ನೀಡಿದ್ದೆ. ಅದರಂತೆ ಒಟ್ಟು 76 ಕುಟುಂಬಗಳಿಗೆ ಹಕ್ಕುಪತ್ರವನ್ನು ವಿತರಿಸಲಾಯಿತು ಎಂದು ತಿಳಿಸಿದರು.

Comments are closed.