ಕರಾವಳಿ

ಚುಟುಕು ಸಂಕಲನ-2020 ಪುಸ್ತಕ ಬಿಡುಗಡೆ : ಚುಟುಕಿನ 55 ಕವಿಗಳ ಪುಸ್ತಕ ಬಿಡುಗಡೆ

Pinterest LinkedIn Tumblr

ಮಂಗಳೂರು ಜುಲೈ 29 : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಚುಟುಕು ಸಂಕಲನ-2020 ಬಿಡುಗಡೆ ಕಾರ್ಯಕ್ರಮ ವಾರ್ತಾ ಇಲಾಖೆ ಸಭಾಂಗಣದಲ್ಲಿ ಇಂದು ನಡೆಯಿತು.

ಚುಟುಕಿನ 55 ಕವಿಗಳ ಪುಸ್ತಕ ಬಿಡುಗಡೆಗೊಳಿಸಿದ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ, ಕನ್ನಡ ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯದ ಕೊಡುಗೆ ಅಪಾರ. ಬಿಡುಗಡೆಗೊಂಡ ಚುಟುಕು ಸಂಕಲನವು ಚುಟುಕಿನ ಜೊತೆಗೆ ಕವಿಗಳನ್ನು ಪರಿಚಯಿಸುತ್ತಿರುವುದು ವಿಶೇಷ. ಈ ಮೂಲಕ ಚುಟುಕು ಹಾಗೂ ಕವಿಗಳ ದಾಖಲೀಕರಣವಾಗುತ್ತದೆ. ಇದು ಇತಿಹಾಸದ ಭಾಗವಾಗಿ ಭವಿಷ್ಯದಲ್ಲಿ ಅಧ್ಯಯನಕ್ಕೆ ಪೂರಕವಾಗುತ್ತದೆ ಎಂದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ, ಮಹಾಭಾರತದಲ್ಲಿ ಕರ್ಣ, ರಾಷ್ಟ್ರಕವಿ ಕುವೆಂಪು, ಸೇರಿದಂತೆ ಯಕ್ಷಗಾನದಲ್ಲಿಯೂ ಕೂಡ ಚುಟುಕು ಸಾಹಿತ್ಯವನ್ನು ಅರಿತುಕೊಳ್ಳಬಹುದು. ಚುಟುಕು ರಚನೆಗೆ ಭಾಷಾಪ್ರಭುತ್ವತೆ, ಚಾತುರ್ಯ, ಜೊತೆಗೆ ನೋವು ನಲಿವು ಬೆಸೆಯುವ ಅಂಶ ಒಳಗೊಂಡಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇಮಂಡ್ ಡಿಕುನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಸುರೇಶ್ ನೆಗಳಗುಳಿ ಮತ್ತಿತರರು ಉಪಸ್ಥಿತರಿದ್ದರು.

Comments are closed.