ಮಂಗಳೂರು ಜುಲೈ 29 : ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಗೆ ಇತ್ತೀಚೆಗೆ ಮಾಸ್ಕ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಸದಾಶಿವ ಮಾತನಾಡಿ, ಕ್ಲಪ್ತ ಸಮಯದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್‍ಗಳನ್ನು ನೀಡಿರುವುದಕ್ಕೆ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಚಿರಋಣಿಯಾಗಿದ್ದೇವೆ ಎ0ದರು.
ದ.ಕ. ಜಿಲ್ಲಾ ಸರಕಾರಿ ನೌಕರರ ಸ0ಘದ ಅಧ್ಯಕ್ಷ ಪಿ.ಕೆ. ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಎ0.ಎಸ್, ಉಪಾಧ್ಯಕ್ಷರಾದ ಜಗದೀಶ್, ಗಣೇಶ್ ರಾವ್, ದೇವದಾಸ್, ಕ್ರೀಡಾ ಕಾರ್ಯದರ್ಶಿ ಸುಧೀರ್ ಕುಮಾರ್, ಕಾರ್ಯಕಾರಿ ಸದಸ್ಯೆ ಶಶಿಕಲಾ, ನಿಕಟಪೂರ್ವ ಕಾರ್ಯದರ್ಶಿ ಬಿ.ಶೇಷಪ್ಪ ಹಾಜರಿದ್ದರು.
Comments are closed.