ಕರಾವಳಿ

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಗೆ ಪಾಸಿಟಿವ್ : ಬೆಂಗಳೂರಿನಲ್ಲಿ ಕ್ವಾರಂಟೈನ್

Pinterest LinkedIn Tumblr

ಮಂಗಳೂರು: ಜಿಲ್ಲೆಯಲ್ಲಿ ಸದಾ ಸಮಾಜ ಸೇವೆಯಲ್ಲಿ ನಿರತರಾಗಿರುವ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಈ ಬಗ್ಗೆ ಸ್ವತಹ ಅವರೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ‘ನನಗೆ ಕೊರೋನ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಗುಣಮುಖನಾಗುತ್ತೇನೆ’ ಎಂದವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಮಿಥುನ್ ರೈ ಜನಸೇವೆಯನ್ನು ತನ್ನ ಉಸಿರಾಗಿಸಿಕೊಂಡು ಕಾರ್ಯನಿರ್ವಹಿಸಿದ್ದರು. ಲಾಕ್ ಡೌನಿನ ಸಂದರ್ಭದಲ್ಲಿ ಕರಾವಳಿ ಜಿಲ್ಲೆಯಲ್ಲಿ ಸುಮಾರು 50 ದಿನಗಳ ಕಾಲ ನಿರಾಶ್ರಿರತರಿಗೆ ಆಶ್ರಯ ಕೊಟ್ಟು ಮತ್ತು ಹಸಿವಲ್ಲಿ ಯಾರು ಇರಬಾರದು ಎಂದು ಅರಿತು ಮನೆ ಮನೆಗೆ ದಿನಸಿ ಆಹಾರ ಸಾಮಗ್ರೀಯನ್ನು ಕಲ್ಪಿಸಿ ಕೊಟ್ಟ ಯುವ ನಾಯಕ ಮಿಥುನ್ ರೈ ಅವರು ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದು, ಈ ವೇಳೆ ಅವರು ಹಲವಾರು ಮಂದಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಇವರಿಗೆ ಸೋಂಕು ತಗುಲಿರ ಬಹುದು ಎಂದು ಶಂಕಿಸಲಾಗಿದೆ.

ಮಿಥುನ್ ರೈ ಯವರ ಕೊರೋನಾ ವೈಧ್ಯಕೀಯ ವರದಿ ಪಾಸೀಟಿವ್ ಆಗಿ ಬಂದಿದ್ದು ಆ ದೇವರ ಆಶಿರ್ವಾದ ಅವರ ಮೇಲಿರಲಿ ಹಾಗೂ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಸಾಮಾಜಿಕ ಜಲತಾಣಗಳಲ್ಲಿ ಅವರ ಅಧಿಕ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರು ಬರಹಗಳನ್ನು ಪೋಸ್ಟ್ ಮಾಡಿದ್ದಾರೆ.

Comments are closed.