ಮಂಗಳೂರು : ಶ್ರೀ ಹರಿಪಾದಗೈದಿರುವ ಪರಮ ಪೂಜ್ಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸಂಸ್ಮರಣೆಯೊಂದಿಗೆ ಕುಲದೇವತಾನುಗ್ರಹ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾಗಿದ್ದ ಸಾಮವೇದ ಸಂಹಿತಾ ಯಾಗವು ಜುಲೈ 15ರಂದು ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು.
ಯಾಗವು ಜುಲೈ 9 ರಂದು ಆರಂಭಗೊಂಡಿತ್ತು. ನಗರದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದ, ವಾದಿರಾಜ ಮಂಟಪದಲ್ಲಿ ಜರಗಿದ ಯಾಗದ ಪ್ರಧಾನ ಆಚಾರ್ಯತ್ವ ಹಾಗೂ ಅಧ್ವರ್ಯುವಾಗಿ ವೇ. ಮೂ. ನೀಲಾವರ ಕೆಳಕುಂಜಾಲು ನಾಗರಾಜ ಮಕ್ಕಿತ್ತಾಯ ಪಾಲ್ಗೊಂಡಿದ್ದರು.
ಯಜ್ಞ ವೀಕ್ಷಕ ಮತ್ತು ರಕ್ಷಕರಾಗಿ ಪಾರ್ತಿಬೆಟ್ಟು ಚೇರ್ಕಾಡಿ ನರಸಿಂಹ ಮೂರ್ತಿ ನಕ್ಷತ್ರಿ, ಅನುವಾಚಕರಾಗಿ ಕೋಟೆ ಉಳ್ಳೂರು ಮಹಾಬಲೇಶ್ವರ ತುಂಬಿಕಲ್ಲಾಯ, ಕಲಶ ಪೂಜಾ ಕೈಂಕರ್ಯವನ್ನು ಕೋಟೆ ಉಳ್ಳೂರು ವಿಶ್ವನಾಥ ತುಂಬಿಕಲ್ಲಾಯ, ಉದ್ದೇಶ ತ್ಯಾಗ ಜಪವನ್ನು ಕೊಡವೂರು ರಾಘವೇಂದ್ರ ಅಡಿಗ ಹಾಗೂ ಪಾರಾಯಣವನ್ನು ಡಾ. ಪ್ರಭಾಕರ ಅಡಿಗ ನೆರವೇರಿಸಿದರು.
ವೇ. ಮೂ. ರಾಜಪುರೋಹಿತ ಗಣಪತಿ ಅಚಾರ್ಯ ಕದ್ರಿ ಇವರ ದಿವ್ಯ ಉಪಸ್ಥಿತಿಯಲ್ಲಿ ನೇರವೇರಿದ ಯಾಗದಲ್ಲಿ ಅನೇಕ ಋತ್ವಿಜರು ಸಹಕರಿಸಿದ್ದರು.
ಯಾಗ ಪೂರ್ಣಾಹುತಿಯ ಸಂದರ್ಭ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಮೊದಲಾದವರು ಉಪಸ್ಥಿತಿರಿದ್ದರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.
Comments are closed.