ಮಂಗಳೂರು : ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಸರಕಾರ ಲೋಕ್ ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವ ಜೊತೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ (ಕಾಂಗ್ರೆಸ್) ನಿಯೋಗದಿಂದ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಲೋಕ್ ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಚಿಕಿತ್ಸೆಗೆ ನೀಡಲು ವಿಧಿಸುವ ಚಿಕಿತ್ಸಾ ವೆಚ್ಚ ದುಭಾರಿ ಯಾಗಿದ್ದು ಸರಕಾರ ಮಾಡಿರುವ ಮಾರ್ಗ ಸೂಚಿಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಇನ್ನೂ ಕಡಿಮೆ ಮಾಡಿ ಸರಕಾರದ ಮಾರ್ಗ ಸೂಚಿಯಂತೆ ದರ ವಸೂಲಿ ಮಾಡುವಂತೆ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿ ಹೆಚ್ಚು ಹಣ ವಸೂಲು ಮಾಡುವ ಆಸ್ಪತ್ರೆ ಗಳ ಮೇಲೆ ಕ್ರಮ ಕೈಗೊಳ್ಳಬೇಕು, ಮೆಡಿಕಲ್ ಕಾಲೇಜ್ ಆಸ್ಪತೆ ಗಳ ಮೂಲಕ ಎಲ್ಲರಿಗೂ ಬಿ. ಪಿ. ಎಲ್ ಮತ್ತು ಎ. ಪಿ.ಎಲ್ ಎಂಬ ಭೇಧವಿಲ್ಲದೆ ಕೇವಲ ತನ್ನ ಗುರುತು ಚೀಟಿ ಆಧಾರ್ ಕಾರ್ಡ್ ತೋರಿಸಿದ ಕೂಡಲೇ ಉಚಿತ ವಾಗಿ ಕೊರಾನ ಕ್ಕೆ ಚಿಕಿತ್ಸೆ ನೀಡಬೇಕು, ಸಮುದಾಯ ಆಸ್ಪತೆ ಗಳ ಮೂಲಕ ಉಚಿತ ಕೊರೊನಾ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು, ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಮತ್ತು ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Comments are closed.