ಕರಾವಳಿ

ಮಂಗಳೂರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ಇಮ್ಯುನೋ ಕಿಟ್ಸ ಹರ್ಬಲ್ ಟೀ” ಬಿಡುಗಡೆ

Pinterest LinkedIn Tumblr

ಮಂಗಳೂರು : ಮಂಗಳೂರಿನ ಹೆಸರಾಂತ ಕಿಟ್ಸ್ ಫಾರ್ಮಸ್ಯುಟಿಕಲ್ಸ್ ವರ್ಕ್ ಸಂಸ್ಥೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯುನೋ ಕಿಟ್ಸ ಹರ್ಬಲ್ ಟೀ ಎಂಬ ನೂತನ ಉತ್ಪನ್ನವನ್ನು ಪರಿಚಯಿಸಿದ್ದು, ಇದರ ಬಿಡುಗಡೆ ಕಾರ್ಯಕ್ರಮ ಜೂನ್ ೧೩ರಂದು ನಗರದ ಹೋಟೆಲ್ ವುಡ್‌ಲ್ಯಾಂಡ್ ನಲ್ಲಿ ನಡೆಯಿತು.

ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಾಕಾಮಾನಂದ ಸ್ವಾಮೀಜಿಯವರು ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಿದರು.

ಕಿಟ್ಸ್ ಫಾರ್ಮಸ್ಯುಟಿಕಲ್ಸ್ ವರ್ಕ್ ಸಂಸ್ಥೆಯು ಕಳೆದ 60 ವರ್ಷಗಳಿಂದ ಅಯುರ್ವೇದ ಔಷಧಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಈಗ ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯವರ್ಧನೆಗಾಗಿ ಔಷಧಿಯ ಗುಣವುಳ್ಳ ಹರ್ಬಲ್ ಟೀ ಯನ್ನು ಬಿಡುಗಡೆಗೊಳಿಸಿದೆ. ಇದು ಈ ಸಂದರ್ಭಕ್ಕೆ ಪ್ರಸ್ತುತವಾಗಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ಕಿಟ್ಸ್ ಫಾರ್ಮಸ್ಯುಟಿಕಲ್ಸ್ ವರ್ಕ್ ಸಂಸ್ಥೆಯ ನವೀನ್ ಪ್ರಭು ಅವರು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯುನೋ ಕಿಟ್ಸ ಹರ್ಬಲ್ ಟೀ ಬಗ್ಗೆ ಮಾಹಿತಿ ನೀಡಿದರು.

ಜಿಎಂಪಿ ಮಾನದಂಡಗಳಿಗೆ ಅನುಗುಣವಾಗಿ ಕಿಟ್ಸ್ ಸಂಸ್ಥೆಯು ಇಮ್ಯುನೋ ಕಿಟ್ಸ ಹರ್ಬಲ್ ಟೀಯನ್ನು ತಯಾರಿಸಿದೆ. ಇದರಲ್ಲಿ ತುಳಸಿ, ದಾಲ್ಚಿನ್ನಿ, ಅರಿಶಿನ, ಹಿಪ್ಪಲಿ, ಶುಂಠಿ, ಕರಿಮೆಣಸಿನ‌ ಔಷಧೀಯ‌ ಅಂಶಗಳಿಂದ ಸಮೃದ್ಧವಾಗಿದ್ದು ನರಗಳಿಗೆ ಶಕ್ತಿಯನ್ನು ತುಂಬಿ‌ ಒತ್ತಡವನ್ನು ನಿವಾರಣೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ವಯೋಮಾನದವರು‌ ಇದನ್ನು ಸೇವಿಸ ಬಹುದಾಗಿದ್ದು ಚಹಾ ಕಾಫಿಗೆ ಪರ್ಯಾಯವಾಗಿ‌ ಇದನ್ನುಬಳಸ ಬಹುದಾಗಿದೆ ಎಂದು ಹೇಳಿದರು.

ಜಾಗತಿಕ ತಲ್ಲಣಗಳನ್ನುಸೃಷ್ಟಿಸಿ‌ ಇಡೀ ಮನುಕುಲವನ್ನು ಬೆಚ್ಚಿ ಬೀಳಿಸಿರುವ ಕರೋನ ವೈರಸ್ಗೆ‌ ಔಷಧಿ‌ ಇಲ್ಲದಿರುವುದು ನಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಈ ಕರೋನ ವೈರಸ್ಗೆ ಮದ್ದು ಕಂಡು ಹಿಡಿಯುವವರೆಗೆ ಪ್ರತಿಯೊಬ್ಬರು ‌ಅಗತ್ಯ ಮುನ್ನೆಚ್ಚರಿಕೆ ಯೊಂದಿಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಕೊಳ್ಳುವುದು‌ ಅಗತ್ಯವೂ, ಅನಿವಾರ್ಯವೂ ‌ಆಗಿದೆ. ಈ ಹಿನ್ನೆಲೆಯಲ್ಲಿ  ಕಳೆದ 60 ವರ್ಷಗಳಿಂದ ಅಯುರ್ವೇದ ಔಷಧಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಮಂಗಳೂರಿನ ಹೆಸರಾಂತ ಕಿಟ್ಸ್ ಫಾರ್ಮಸ್ಯುಟಿಕಲ್ಸ್ ವರ್ಕ್ ಸಂಸ್ಥೆಯು “ಇಮ್ಯುನೋ ಕಿಟ್ಸ ಹರ್ಬಲ್ ಟೀ” ಎಂಬ ನೂತನ ಉತ್ಪನ್ನವನ್ನು ಪರಿಚಯಿಸುತ್ತಿದೆ ಎಂದು ತಿಳಿಸಿದರು.

ಈ‌ಉತ್ಪನ್ನವನ್ನುಕರೋನಾಲಾಕ್ಡೌನ್ಸಂದರ್ಭದಲ್ಲಿನಿರಂತರ 60 ದಿನಗಳ ಕಾಲ ಹರಿಹರ ಪಾಂಡುರಂಗ ಭಜನಾ ಮಂದಿರದ ಕೇಂದ್ರಿತವಾಗಿ ಕರೋನ ವಾರಿಯರ್ಸ್ಗಳ ಸೇವೆಯ ಕಾರ್ಯಕರ್ತರಿಗಾಗಿ ಕಿಟ್ಸ್
ಸಂಸ್ಥೆಯು ಉಚಿತವಾಗಿ ನೀಡಿತು, ಮತ್ತು‌ ಅವರೊಂದಿಗೆ ಕೈಜೋಡಿಸಿ‌  “ಇಮ್ಯುನೋ ಕಿಟ್ಸ ಹರ್ಬಲ್ ಟೀ” ಯನ್ನು‌ ಅವರು ನೀಡುವ ‌ಉಚಿತ‌ ಆಹಾರದೊಂದಿಗೆ ವಿತರಿಸುವ ಕಾರ್ಯ ನಿರ್ವಹಿಸಿತು.

ಹರ್ಬಲ್ಟೀಯನ್ನು 40 ದಿನಗಳಿಗಿಂತಲೂ ಹೆಚ್ಚು ದಿನ ಸೇವಿಸಿದ ಪೊಲೀಸ್ಸಿಬ್ಬಂದಿಗಳು, ಆಶಾಕಾರ್ಯಕರ್ತರು ಮತ್ತು ಸಂಸ್ಥೆಯ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗಿರುವುದರೊಂದಿಗೆ‌ ಇನ್ನಷ್ಟು ಬೇಡಿಕೆ ಬಂದಿರುವ ಕಾರಣ ಸಂಸ್ಥೆಯು ಜನಮಾನಸಕ್ಕೆ‌ ಈ‌ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ.

ಆಯುಷ್ ‌ಇಲಾಖೆಯ ನಿಯಮಕ್ಕೆ ‌ಅನುಸಾರವಾಗಿ ‌ಅರ್ಜಿಯನ್ನುಸಲ್ಲಿಸಿ ‌ಅದಕ್ಕೆ ಸಂಬಂಧ ಪಟ್ಟ ತಜ್ಞರ ವರದಿಯನ್ನು ನೀಡಿ ಮತ್ತು ಸೇವಿಸಿದವರ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವ‌ ಅಧಿಕೃತ ವರದಿ ಸಂಗ್ರಹಿಸಿ‌ ಇಲಾಖೆಗೆ ನೀಡಿದ ಪರಿಣಾಮ‌ ಇಲಾಖೆ‌ ಇದನ್ನು ಪರಿಗಣಿಸಿ ‌ಔಷಧಿ ಪರೀಕ್ಷಕರು ‌ಔಷಧಿ ತಯಾರಿಸಲು‌ ಅನುಮತಿ ನೀಡಿದ್ದಾರೆ. ಇದಕ್ಕಾಗಿ‌ ಆಯುಷ್‌ ಇಲಾಖೆಗೆ ನಾವು ಕೃತಜ್ಞತೆಯನ್ನು ಕೂಡ ಸಲ್ಲಿಸುತ್ತಿದ್ದೇವೆ ಎಂದು ನವೀನ್ ಪ್ರಭು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ನಿಶಾಂತ್ ಪೈ, ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀಕರ್ ಪ್ರಭು ಅವರು ಈ ಬಗ್ಗೆ ಪೂರಕ ಮಾಹಿತಿಯನ್ನು ನೀಡಿದರು.

Comments are closed.