ಕರಾವಳಿ

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸರ್ಕಾರಕ್ಕೆ ಶರತ್ತುಗಳನ್ನು ವಿಧಿಸಿದ “ಛಾತ್ರ ಯುವ ಸಂಘರ್ಷ ಸಮಿತಿ”

Pinterest LinkedIn Tumblr

ಕೋರೂನಾ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾದರೆ ಈ ಸವಲತ್ತುಗಳನ್ನು ನೀಡಿ : ಛಾತ್ರ ಯುವ ಸಂಘರ್ಷ ಸಮಿತಿ ಸರ್ಕಾರಕ್ಕೆ ಆಗ್ರಹ

ಮಂಗಳೂರು : ಕೋರೂನಾ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬೇಕಾದರೆ ಅವರಿಗೆ ಈ ಕೆಳಗಿನ ಸವಲತ್ತುಗಳನ್ನು ನೀಡಬೇಕು ಎಂದು “ಛಾತ್ರ ಯುವ ಸಂಘರ್ಷ ಸಮಿತಿ”ಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದಾದರೆ ಈ ಕೆಳಗಿನ ನಿಯಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಂಜೂರು ಮಾಡಬೇಕು ನಂತರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಅವಕಾಶಮಾಡಿ ಕೊಡಬೇಕು ಎಂದು ಸಮಿತಿ ಆಗ್ರಹಿಸಿದೆ.

ನಿಯಮಗಳು :
1. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ಸು ಪ್ರಯಾಣಗಳನ್ನು ಕರ್ನಾಟಕ ರಾಜ್ಯಾದ್ಯಂತ ಒದಗಿಸಬೇಕು.

2. ಮುಂಬರುವ ವರ್ಷದ ಕಾಲೇಜು ಶುಲ್ಕವನ್ನು 50% ಕಡಿತಗೊಳಿಸಬೇಕು.

3.ಯಾವುದೇ ವಿದ್ಯಾರ್ಥಿಗಳು ಪರೀಕ್ಷಾ ಮತ್ತು ಪ್ರಸ್ತುತ ಸೆಮಿಸ್ಟರ್‌ಗೆ ಮರು ಮೌಲ್ಯಮಾಪನದ ಶುಲ್ಕವನ್ನು ಪಾವತಿಸುವುದಿಲ್ಲ ಮತ್ತು ಅದನ್ನು ಸರ್ಕಾರ ಭರಿಸಬೇಕು.

4. ಪ್ರತಿಯೊಬ್ಬ ವಿದ್ಯಾರ್ಥಿಗೆ ಎನ್95 ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಬೇಕು.

5.ಪರೀಕ್ಷೆಯನ್ನು ಕೇವಲ 60% ಪಠ್ಯಕ್ರಮ ಅಥವಾ ಯಾವುದೇ 3/5 ಮಾಡ್ಯೂಲ್‌ಗಳಲ್ಲಿ ನಡೆಸಬೇಕು.

6. ಪರೀಕ್ಷೆಯ ಕಾರಣದಿಂದಾಗಿ ಯಾವುದಾದರೂ ವಿದ್ಯಾರ್ಥಿಗಳಿಗೆ ಕೋರೂನಾ ಭಾದಿಸಿದರೆ ಅವರ ಖರ್ಚುಗಳನ್ನು ರಾಜ್ಯ ಸರ್ಕಾರ ಭರಿಸಬೇಕು.

7.ಈ ವರೆಗೆ ಮಾಡಿದ ಪಾಠವನ್ನು 2-3 ವಾರಗಳ ಶಿಕ್ಷಿಕರಿಂದ ವಿದ್ಯಾರ್ಥಿಗಳಿಗೆ ಪುನರ್ವಸಬೇಕು.

8. ಕರ್ನಾಟಕದಲ್ಲಿ ಯಾವುದೇ ವಿದ್ಯಾರ್ಥಿ ಸತ್ತರೆ, ಅವರ ಕುಟುಂಬಕ್ಕೆ ಕನಿಷ್ಠ 3 ಕೋಟಿ ಮೊತ್ತವನ್ನು ಪರಿಹಾರವಾಗಿ ನೀಡಬೇಕು.

ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಒಪ್ಪಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಪರೀಕ್ಷೆಯನ್ನು ಮುಂದೂಡುವಂತೆ “ಛಾತ್ರ ಯುವ ಸಂಘರ್ಷ ಸಮಿತಿ” ಆಗ್ರಹಿಸಿದೆ.

 

Comments are closed.