ಕರಾವಳಿ

“ವಿಶ್ವ ರಕ್ತದಾನಿಗಳ ದಿನ” : ರೆಡ್‍ಕ್ರಾಸ್‌ನಿಂದ ರಕ್ತದಾನಿಗಳಿಗೆ ಗೌರವ ಪುರಸ್ಕಾರ – ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಮೇ 28 : ರಕ್ತದಾನ ಅತ್ಯಂತ ಪವಿತ್ರವಾದ ದಾನ. ಇದು ಸಾವಿರಾರು ಜನರ ಪ್ರಾಣ ವನ್ನು ನಿತ್ಯವೂ ಉಳಿಸುತ್ತಿದೆ. ಜಿಲ್ಲೆಯಲ್ಲಿ ಸಹಸ್ರಾರು ಯುವಕ ಯುವತಿಯರು ಪ್ರತಿನಿತ್ಯ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ರೋಗಿಗಳ ಜೀವಕ್ಕೆ ಆಶಾಕಿರಣವಾಗಿರುತ್ತಾರೆ. ಅಂತಹ ರಕ್ತದಾನಿಗಳ ಸ್ವಯಂಪ್ರೇರಿತ ಸೇವೆಯನ್ನು ಸ್ಮರಿಸುವ ದಿನ “ವಿಶ್ವ ರಕ್ತದಾನಿಗಳ ದಿನ” ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುವುದು ಹಾಗೂ ರಕ್ತದಾನಿಗಳನ್ನು ಗೌರವಿಸಲಾಗುವುದು.

15 ಬಾರಿಗಿಂತ ಮೇಲ್ಪಟ್ಟು ರಕ್ತದಾನ ಮಾಡಿದ ವ್ಯಕ್ತಿಗಳು ದಾಖಲೆಗಳೊಂದಿಗೆ ಮಾಹಿತಿ ನೀಡುವುದು. ಒಂದೇ ಕುಟುಂಬದ ಎಲ್ಲಾ ಅರ್ಹ ಸದಸ್ಯರು ರಕ್ತದಾನ ನೀಡಿದ್ದಲ್ಲಿ ಅವರೂ ಕೂಡಾ ಗೌರವಕ್ಕೆ ಪಾತ್ರರಾಗುತ್ತಾರೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ ಸಂಘ ಸಂಸ್ಥೆಗಳನ್ನೂ ಪ್ರೋತ್ಸಾಹಿಸಿ, ಗೌರವಿಸುವ ಕಾರ್ಯಕ್ರಮವಿದ್ದು ಅವರು ಕೂಡಾ ದಾಖಲೆಗಳೊಂದಿಗೆ ಅರ್ಜಿ ನೀಡಬಹುದು.

ದಾಖಲೆಗಳ ಪರಿಶೀಲನೆ ಮತ್ತು ಆಯ್ಕೆಯ ವಿಧಾನದಲ್ಲಿ ರೆಡ್‍ಕ್ರಾಸಿನ ತೀರ್ಮಾನವೇ ಅಂತಿಮ.

ಆಸ್ತಕರು ಜೂನ್ 4ರೊಳಗೆ ಗೌರವ ಕಾರ್ಯದರ್ಶಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ, ರೆಡ್‍ಕ್ರಾಸ್ ಭವನ, ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಮಂಗಳೂರು ಇವರಿಗೆ ದಾಖಲೆಗಳನ್ನು ನೀಡಬಹುದು.

ಹೆಚ್ಚಿನ ಮಾಹಿತಿಗಳಿಗೆ ದೂರವಾಣಿ : 0824-2423755 ಇ-ಮೇಲ್ : ircsdkd@gmail.com ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ

Comments are closed.