ಕರಾವಳಿ

ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ : ಸಾವ೯ಜನಿಕರಿಗೆ ಮನವರಿಕೆಗೆ ಸೂಚನೆ

Pinterest LinkedIn Tumblr

ಮಂಗಳೂರು: ನಗರದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣದ ಕುರಿತು ಕೈಗೊಳ್ಳಬೇಕಾದ ಕ್ರಮಗಳನ್ನು ವಿಶ್ಲೇಷಿಸಿ ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಭೆ ಜರುಗಿತು.

ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಾವ೯ಜನಿಕರು ತಮ್ಮ ವಾಸ ಸ್ಥಳದ ಸುತ್ತ ಮುತ್ತಲೂ ಮಳೆ ನೀರು ನಿಲ್ಲುವ ರೀತಿಯಲ್ಲಿ ಯಾವುದೇ ವಸ್ತುಗಳನ್ನು ಇರಿಸಬಾರದಾಗಿ ಸಾವ೯ಜನಿಕರಿಗೆ ಮನವರಿಕೆ ಮಾಡುವಂತಹ ಕಾಯ೯ ಮಾಡುವಂತೆ ತಿಳಿಸಲಾಯಿತು.

ಸಭೆಯಲ್ಲಿ ಮಹಾಪೌರರಾದ ಶ್ರೀ ದಿವಾಕರ್, ಉಪಮಹಾಪೌರರಾದ ಶ್ರೀಮತಿ ಜಾನಕಿ, ಪಾಲಿಕೆಯ ಆಯುಕ್ತರಾದ ಶ್ರೀ ಅಜಿತ್ ಕುಮಾರ್ ಹೆಗ್ಡೆ, ಜಿಲ್ಲಾ ವೈದ್ಯಾಧಿಕಾರಿ ಡಾ| ನವೀನ್ ಚಂದ್ರ ಕುಮಾರ್, ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು, ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಎಂ.ಪಿ.ಡಬ್ಲ್ಯೂ ಕಾಯ೯ಕತೆ೯ಯರು ಉಪಸ್ಥಿತರಿದ್ದರು.

Comments are closed.