ಕರಾವಳಿ

ಆದಿತ್ಯವಾರ ಈದುಲ್ ಫಿತ್ರ್ ಸಾಧ್ಯತೆ : ಕರ್ಫ್ಯೂ ಸಡಿಲಿಸುವಂತೆ ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ

Pinterest LinkedIn Tumblr

ಮಂಗಳೂರು : ರಮಝಾನ್ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್ (ರಂಝಾನ್ ಹಬ್ಬ) ಆದಿತ್ಯವಾರವೇ ಆಗುವ ಸಾಧ್ಯತೆ ಇರುವುದರಿಂದ ಬಾನುವಾರ ರಂಝಾನ್ ಹಬ್ಬದ ದಿನ ಜಿಲ್ಲೆಯಲ್ಲಿ ವಾಹನಗಳ ಓಡಾಟಕ್ಕೆ ಅನುಮತಿಸಿ (ಸಾಮಾಜಿಕ ಅಂತರ ಪಾಲಿಸಿ) ಕಫ್ರ್ಯೂ ಸಡಿಲಿಕೆಯ ಆದೇಶ ಹೊರಡಿಸುವಂತೆ ಶಾಸಕ ಯು.ಟಿ.ಖಾದರ್ ಅವರು ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಿಂಗಳು ಪೂರ್ತಿ ರಮಝಾನ್ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್ (ರಂಝಾನ್ ಹಬ್ಬ) ಚಂದ್ರದರ್ಶನದ ಮೇಲೆ ಅವಲಂಭಿಸಿದ್ದರೂ, ಆದಿತ್ಯವಾರವೇ ಹಬ್ಬವಾಗುವ ಸಾಧ್ಯತೆ ಹೆಚ್ಚಿದೆ.

ಪವಿತ್ರ ರಮಝಾನ್ ತಿಂಗಳ ಎಲ್ಲ ಪ್ರಾರ್ಥನೆಗಳು ಒಳಗೊಂಡಂತೆ ಹಬ್ಬದ ವಿಶೇಷ ಪ್ರಾರ್ಥನೆಯನ್ನೂ ಮನೆಯಲ್ಲೇ ನಿರ್ವಹಿಸಲಿರುವ ಜಿಲ್ಲೆಯ ಮುಸ್ಲಿಮರು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಪ್ರತೀ ಆದಿತ್ಯವಾರ ಕಫ್ರ್ಯೂ ಘೋಷಿಸಿದ್ದು, ಆಕಸ್ಮಿಕವಾಗಿ ಆದಿತ್ಯವಾರವೇ ಹಬ್ಬವಾದಲ್ಲಿ ಮುಸ್ಲಿಮರು ಮನೆಯಿಂದ ಹೊರಗಡೆ ಬರಲಾಗದ ಪರಿಸ್ಥಿತಿ (ಕಫ್ರ್ಯೂ ಹಿನ್ನೆಲೆಯಿಂದ) ಎದುರಿಸಲಿದ್ದಾರೆ.

ಹಬ್ಬದ ದಿನ ಎಲ್ಲ ಮಕ್ಕಳು ತಮ್ಮ ಪಾಲಕರು, (ಅಪ್ಪ, ಅಮ್ಮ) ಹಿರಿಯರು, ಕುಟುಂಬದ ಆಪ್ತ ಬಂಧುಗಳನ್ನು ಭೇಟಿ ಮಾಡಿ ಉಡುಗೊರೆಗಳನ್ನು ನೀಡಿ, ಪರಸ್ಪರ ಶುಭ ಹಾರೈಸುವುದು ವಾಡಿಕೆ. ಸರಕಾರದ ಕಫ್ರ್ಯೂ ವಾಹನಗಳ ಓಡಾಟವನ್ನು ತಡೆಯುವುದರಿಂದ ಹಲವು ಮುಸ್ಲಿಮರು ಹಬ್ಬದ ಮೂಲ ಸಂಭ್ರಮದಿಂದ ವಂಚಿತರಾಗಲಿದ್ದಾರೆ.

ಈ ಕುರಿತಂತೆ ದ.ಕ. ಜಿಲ್ಲಾ ಎನ್.ಜಿ.ಒ. ಸಮನ್ವಯ ಸಮಿತಿಯು ನೀಡಿರುವ ಮನವಿ ಮೇರೆಗೆ ಇಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ರನ್ನು ಸಂಪರ್ಕಿಸಿ, ರಂಝಾನ್ ಹಬ್ಬದ ದಿನ ಜಿಲ್ಲೆಯಲ್ಲಿ ವಾಹನಗಳ ಓಡಾಟಕ್ಕೆ ಅನುಮತಿಸಿ (ಸಾಮಾಜಿಕ ಅಂತರ ಪಾಲಿಸಿ) ಕಫ್ರ್ಯೂ ಸಡಿಲಿಕೆಯ ಆದೇಶ ಹೊರಡಿಸುವಂತೆ ವಿನಂತಿಸಿದ್ದೇನೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿರುವ ಜಿಲ್ಲಾಧಿಕಾರಿಯವರು ಪೋಲಿಸ್ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ, ಜಿಲ್ಲಾಡಳಿತದ ತೀರ್ಮಾನವನ್ನು ಇಂದು ತಿಳಿಸುವುದಾಗಿ ಹೇಳಿರುತ್ತಾರೆ ಎಂದು ಶಾಸಕ ಖಾದರ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Comments are closed.