ಕರಾವಳಿ

ಮಂಜನಾಡಿ ಜುಮಾ ಮಸೀದಿ : ಯಾತ್ರಿ ನಿವಾಸ ಮತ್ತು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

Pinterest LinkedIn Tumblr

ಉಳ್ಳಾಲ, ಮೇ 21: ಪ್ರವಾಸೋಧ್ಯಮದೊಂದಿಗೆ ಸರ್ವಧರ್ಮದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯಾತ್ರಿ ನಿವಾಸಗಳ ನಿರ್ಮಾಣ ಕಾರ್ಯಕ್ಕೆ ಹಿಂದಿನ ಸರಕಾರ ಅನುದಾನ ಮೀಸಲಿಟ್ಟಿದ್ದು ಮಂಜನಾಡಿ ಜುಮಾ ಮಸೀದಿಗೆ ಬರುವ ಯಾತ್ರಾರ್ಥಿಗಳಿಗೆ ಸಹಕಾರಿಯಾಗುವಂತೆ ಸುಸಜ್ಜಿತ ಯಾತ್ರಿ ನಿವಾಸದೊಂದಿಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.

ಅವರು ಮಂಜನಾಡಿಯ ಸೆಯ್ಯದ್ ಇಸ್ಮಾಯಿಲ್ ವಲಿಯುಲಾಹಿ ದರ್ಗಾ, ಬುಸ್ತಾನುಲ್ ಉಲೂಂ ದರ್ಸ್ ಮತ್ತು ಜುಮಾ ಮಸೀದಿ ಮಂಜನಾಡಿ ಇಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖಯಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸ ಮತ್ತು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ , ಮಾತನಾಡಿದರು.

ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಮಂಗಳೂರು ಕ್ಷೇತ್ರಕೆ ಬರುವ ರಾಷ್ಟ್ರ್ರ ಅಂತರಾಷ್ಟ್ರೀಯ ಪ್ರವಾಸಿಗಳಿಗೆ ಸಹಕಾರಿಯಾಗುವಂತೆ ಸೋಮೇಶ್ವರ ದೇವಸ್ಥಾನ, ಪೆರ್ಮನ್ನೂರು ಚರ್ಚ್ ಮಂಜನಾಡಿ ಜುಮಾ ಮಸೀದಿಯಲ್ಲಿ ಯಾತ್ರಿ ನಿವಾಸಕ್ಕೆ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು, ಉಳ್ಳಾಲ ದರ್ಗಾದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಲಿದೆ. ಈ ಯಾತ್ರಿ ನಿವಾಸದ ಮೂಲಕ ಇಲ್ಲಿ ಬರುವ ಯಾತ್ರಿಗಳಿಗೆ ಸಹಕಾರಿಯಾಗಲಿದೆ ಎಂದರು.

ಮಂಜನಾಡಿ ಜುಮಾ ಮಸೀದಿಗೆ ಬರುವ ಪ್ರವಾಸಿಗರಿಗೆ ಈ ಪ್ರದೇಶದಲ್ಲಿ ತಂಗಲು ಹೋಟೆಲ್ ಇಲ್ಲ ಈ ನಿಟ್ಟಿನಲ್ಲಿ ಯಾತ್ರಿ ನಿವಾಸ ಸಹಕಾರಿಯಾಗಲಿದ್ದು ನಮ್ಮ ಕ್ಷೇತ್ರದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋಧ್ಯಮ ಇಲಾಖೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬುಸ್ತಾನುಲ್ ಉಲೂಂ ದರ್ಸ್ ಮತ್ತು ಜುಮಾ ಮಸೀದಿ ಮಂಜನಾಡಿ ಇದರ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಪ್ರ. ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಎನ್.ಎಸ್ ಕರೀಂ, ಬಸರಾ ಮೊಯ್ದಿನ್, ಕೋಶಾ„ಕಾರಿ ನೆಕ್ಕರೆ ಬಾವ,ಮುದರಿಸ್ ಅಹ್ಮದ್ ಬಾಖವಿ , ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಅಸೈ , ಕೆ. ಎಂ. ಕೆ ಮಂಜನಾಡಿ, ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Comments are closed.