ಕರಾವಳಿ

ಕೆ.ಎಸ್.ಆರ್.ಟಿ.ಸಿ. ಟಿಕೆಟ್ ದರ ಹೆಚ್ಚಿಸಿಲ್ಲ : ದ.ಕ.ಜಿಲ್ಲೆಯ ಅಧಿಕಾರಿಗಳಿಂದ ಸ್ಪಷ್ಟನೆ

Pinterest LinkedIn Tumblr

ಮಂಗಳೂರು / ಬಂಟ್ವಾಳ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ಗಳು ನಿನ್ನೆಯಿಂದ ಕಾರ್ಯಾರಂಭವಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಆದರೆ ಯಾವುದೇ ರೀತಿಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಮಂಗಳೂರು-ಪುತ್ತೂರು ನಡುವಿನ ಕೆಎಸ್‌ಟರ್‌ಟಿಸಿ ಬಿ.ಸಿ.ರೋಡು ಘಟಕದ ಬಸ್ಸಿನ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿಂದೆ 42 ರೂ. ಇದ್ದ ಟಿಕೆಟ್‌ಗೆ ಈಗ 61 ರೂ. ಗೆ ಹೆಚ್ಚಿಸಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಪ್ರಯಾಣಿಕರು ಹೇಳುವ ದರ ನಿಗದಿತ ನಿಲುಗಡೆಯ ಬಸ್ಸುಗಳ ದರಗಳು. ಆದರೆ ಹಾಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಜತೆಗೆ ನಿಲುಗಡೆಯೂ ಕಡಿಮೆ ಇದ್ದು, ಹೀಗಾಗಿ ಎಕ್ಸ್ ಪ್ರೆಸ್ ದರದಲ್ಲಿ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ದರ ಹಿಂದೆ ಎಷ್ಟಿತ್ತೋ ಅಷ್ಟೇ ದರವನ್ನು ಪಡೆಯಲಾಗುತ್ತಿದೆ ಎಂದು ಬಿ.ಸಿ.ರೋಡು ಡಿಪೋ ಮ್ಯಾನೇಜರ್ ಶ್ರೀಶ ಭಟ್ ಅವರು ತಿಳಿಸಿದ್ದಾರೆ.

Comments are closed.