ಕರಾವಳಿ

ಬೋಳೂರು ಸೀಲ್ ಡೌನ್ ಪರಿಸರದಲ್ಲಿ ಅಧಿಕಾರಿಗಳ ಮೂಲಕ ಕಿಟ್ ವಿತರಣೆ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು ; ಸೀಲ್ ಡೌನ್ ಜಾರಿಗೊಳಿಸಿರುವ ಬೋಳೂರು ವಾರ್ಡಿನ ನಿವಾಸಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರ ಮನವಿಯ ಮೇರೆಗೆ ಹಿಂದುಸ್ತಾನ್ ಯೂನಿಲಿವರ್ (ಸೋಪ್ ಮತ್ತು ಡಿಟರ್ಜೆಂಟ್ ತಯಾರಕ) ಸಂಸ್ಥೆಯ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸ್ಥಳೀಯ ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವ ಪ್ರದೇಶದ ಉಸ್ತುವಾರಿ ಅಧಿಕಾರಿ ಲಿಂಗೇಗೌಡ ಅವರಿಗೆ ದಿನಸಿ ಸಾಮಾಗ್ರಿಗಳ ಕಿಟ್ನ್ನು ಹಸ್ತಾಂತರಿಸಲಾಯಿತು. ಜಿಲ್ಲಾಡಳಿತದ ಆದೇಶದ ಪ್ರಕಾರ ಅಧಿಕಾರಿಗಳೇ ಮನೆ ಮನೆಗೂ ಕಿಟ್ ವಿತರಿಸಲಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಕಾಮತ್, ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಜಾರಿಗೊಳಿಸಿರುವ ಬೋಳೂರು ಪರಿಸರದ ಜನರು ಬೋಳೂರು ವ್ಯಾಪ್ತಿಯ ಹೊರಗಡೆ ಬರುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಕಷ್ಟಗಳನ್ನು ಅರಿತು ಬೋಳೂರಿನಲ್ಲಿ ಅನೇಕ ವರ್ಷಗಳಿಂದ ಕಾರ್ಯಚರಿಸುವ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯು ಇಂದು ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ ಎಂದು ಶಾಸಕ ಕಾಮತ್ ಶ್ಲಾಘಿಸಿದರು.

ಮಂಗಳೂರಿನ ಮೂರು ಕಡೆಗಳಲ್ಲಿ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಆಯಾಯ ಸ್ಥಳಗಳಲ್ಲಿ ಸ್ಥಳೀಯ ಅಂಗಡಿಗಳ ಮಾಲಕರು,ಅಧಿಕಾರಿಗಳ‌ ಸಹಾಯದಿಂದ ಮನೆ ಮನೆಗೂ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ ಆಗುತ್ತಿದೆ. ಸೀಲ್ ಡೌನ್ ಜಾರಿಗೊಳಿಸಿರುವ ಶಕ್ತಿನಗರ ಕಕ್ಕೆಬೆಟ್ಟು ಹಾಗೂ ಪಡೀಲ್ ಪರಿಸರದ ಜನರಿಗೂ ಕೂಡ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯ ವತಿಯಿಂದ ಕಿಟ್ ಒದಗಿಸಬೇಕು, ಅಲ್ಲಿಯೂ ಕೂಡ ಎರಡೂ ಕಡೆಗಳಲ್ಲಿ 500ಕ್ಕೂ ಅಧಿಕ ಮನೆಗಳಿದ್ದು ಸಂಸ್ಥೆಯ ವತಿಯಿಂದ ಕಿಟ್ ಒದಗಿಸಿದರೆ ಅಧಿಕಾರಿಗಳ ಮೂಲಕ ಜನರಿಗೆ ತಲುಪಿಸಲಾಗುವುದು‌ ಎಂದು ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.

ಹಾಗೆಯೇ ಬೋಳೂರು ಪರಿಸರದಲ್ಲಿ ಹಿಂದುಸ್ಥಾನ್ ಯೂನಿಲಿವರ್ ಸಂಸ್ಥೆಯಿಂದ ದಿನಸಿ ಸಾಮಾಗ್ರಿಗಳನ್ನು ಕೊಡಿಸುವಲ್ಲಿ ಶ್ರಮಿಸಿದ ಕಸ್ತೂರಿ ಪ್ರಭೋದ್ ಪೈ ಅವರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬೋಳೂರಿನಲ್ಲಿ ಸೀಲ್ ಡೌನ್ ಜಾರಿಗೊಳಿಸಿದ ದಿನದಿಂದ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಅವರು ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ಕಾಮತ್ ಪಾಲಿಕೆ ಸದಸ್ಯರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು,ಉಸ್ತುವಾರಿ ಅಧಿಕಾರಿ ಲಿಂಗೇಗೌಡ, ಸಂಸ್ಥೆಯ ಅಧಿಕಾರಿಗಳಾದ ಸಂಜಯ್ ಸಿಕ್ವೇರಾ, ವಿಘ್ನೇಶ್ವರ ಹೆಗ್ಡೆ, ಚಿದಾನಂದ ಯೆಯ್ಯಾಡಿ, ಸ್ಥಳೀಯ ಮುಖಂಡರಾದ ರಾಹುಲ್ ಶೆಟ್ಟಿ, ಕಾರ್ತಿಕ್ ಬಂಗೇರಾ, ರೋಶನ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Comments are closed.