ಕರಾವಳಿ

ಮಂಗಳೂರಿನಲ್ಲಿ ಮತ್ತೆ 3 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ: ಅತಂಕದಲ್ಲಿ ಜಿಲ್ಲೆಯ ಜನತೆ

Pinterest LinkedIn Tumblr

ಮಂಗಳೂರು,ಮೇ.೦6: ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣ ಪತ್ತೆಯಾದಂತಾಗಿದೆ

ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ P-536 ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಬೋಳಾರ ನಿವಾಸಿಗಳಾದ 38 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ.

ಬಂಟ್ವಾಳದ ಪಿ – 360 ರ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಾಲಕಿಯನ್ನು ಎನ್ ಐಟಿಕೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರ ಗಂಟಲು ದ್ರವದ ವರದಿ ಬಂದಿದ್ದು ಅದರಲ್ಲಿ ಸೊಂಕು ಇರುವುದು ಖಚಿತವಾಗಿದೆ.

ಮುಖ್ಯಾಂಶಗಳು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ

ಬೋಳೂರು ಮತ್ತು ಬಂಟ್ವಾಳ ನಿವಾಸಿಗಳಿಗೆ ಪಾಸಿಟಿವ್

ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಮಹಿಳೆಯಿಂದ ಇಬ್ಬರಿಗೆ ವೈರಸ್

P-536 ಕೊರೋನಾ ಪಾಸಿಟಿವ್ ರೋಗಿಯಿಂದ ಇಬ್ಬರಿಗೆ ಕೊರೋನಾ ಪಾಸಿಟಿವ್

11 ವರ್ಷದ ಬಾಲಕಿ ಮತ್ತು‌ 35 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್

ಬಂಟ್ವಾಳ ದ ಮೃತ ಮಹಿಳೆ p-390 ಯಿಂದ ಆಕೆಯ 16 ವರ್ಷದ ಮಗಳಿಗೆ ಪಾಸಿಟಿವ್

Comments are closed.