ಕರಾವಳಿ

ದ.ಕ.ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್‌ನಿಂದ ಕೋವಿಡ್ -19 ಪರಿಹಾರ ನಿಧಿಗೆ ರೂ. 1 ಲಕ್ಷ ದೇಣಿಗೆ

Pinterest LinkedIn Tumblr

ಮಂಗಳೂರು ; ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದಲ್ಲಿ ವ್ಯಾಪಕ ಆರ್ಥಿಕ ವಿನಾಶಕ್ಕೆ ಕಾರಣ ವಾಗಿದೆ. ಅನೇಕ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಅಗತ್ಯವಿರುವವರಿಗೆ ಪರಿಹಾರ ನೀಡುವುದು ಅತ್ಯಗತ್ಯವಾಗಿದೆ. ಈ ಮಾನವೀಯ ಬಿಕ್ಕಟ್ಟಿಗೆ ಸ್ಪಂದಿಸಿದ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ರೂ. ಒಂದು ಲಕ್ಷವನ್ನು ಕೋವಿಡ್ -19 ಪರಿಹಾರಕ್ಕಾಗಿ ದೇಣಿಗೆ ನೀಡಿದೆ.

ಸಂಘದ ಅಧ್ಯಕ್ಷ ಶ್ರೀ ಕಸ್ತೂರಿ ಪ್ರಭಾಕರ್ ಪೈ ಉಪಾಧ್ಯಕ್ಷ ಶ್ರೀ ಹರ್ಷ ಕುಮಾರ್ ಕೆಡಿಗೆ, ಕಾರ್ಯದರ್ಶಿ ಶ್ರೀ ಕೆ.ವಿಲಾಸ್ ಕುಮಾರ್ ಮತ್ತು ಖಜಾಂಚಿ ಶ್ರೀ ಮರೂರ್ ಶಶಿಧರ್ ಪೈ ಅವರ ಸಮ್ಮುಖದಲ್ಲಿ ರೂ. 50,000 / -ದ ಎರಡು ಚೆಕ್ ಗಳನ್ನು ಕ್ರಮವಾಗಿ ‘ಪಿಎಂ ಕೇರ್ಸ್’(ಪ್ರಧಾನ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ) ಮತ್ತು ಕರ್ನಾಟಕದ ‘ಮುಖ್ಯಮಂತ್ರಿ ರಿಲೀಫ್ ಫಂಡ್ ಕೋವಿಡ್-19’ ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ಬಿ. ರೂಪೇಶ್, ಅವರಿಗೆ 2020 ರ ಮೇ 4 ರ ಸೋಮವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಹಸ್ತಾಂತರಿ ಸಿದರು.

Comments are closed.