ಕರಾವಳಿ

ಬೋಳೂರಿನ ಮಹಿಳೆ ವೆನ್‌ಲಾಕ್‌ನಲ್ಲಿ ಮೃತ್ಯು? – ವದಂತಿ : ಬೋಳೂರಿನಲ್ಲಿ ಬಿಗಿ ಬಂದೋಬಸ್ತ್

Pinterest LinkedIn Tumblr

 

ಮಂಗಳೂರು, ಎಪ್ರಿಲ್. 29: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೊರೋನಾ ಸೋಕಿನಿಂದ ವೃದ್ಧೆಯೊಬ್ಬರು ಮೃತಪಟ್ಟಿರುವ ಬಗ್ಗೆ ವ್ಯಾಪಕ ಸುದ್ಧಿ ಹಬ್ಬಿದ್ದು, ವಾಹಿನಿಗಳಲ್ಲಿ ಇದು ಹಾಟ್ ನ್ಯೂಸ್ ಆಗಿ ಪ್ರಕಟಗೊಂಡಿದೆ.

ನಗರದ ಬೋಳೂರು ಸಮೀಪದ ಬೊಕ್ಕಪಟ್ಣ- ನ್ಯಾಶನಲ್ ನಿವಾಸಿ 60 ವರ್ಷದ ವೃದ್ಧೆ ದ.ಕ.ಜಿಲ್ಲೆಯ ಕೊರೋನಾ ಹಾಟ್ ಸ್ಪಾಟ್ ಆಗಿರುವ ಮಂಗಳೂರಿನ ಕಣ್ಣೂರು ಸಮೀಪದ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಅನ್ಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಬಳಿಕ ಉಸಿರಾಟದ ತೊಂದರೆ ಉಂಟಾದ ಕಾರಣ ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ವೃದ್ಧೆ ಬುಧವಾರ ಸಂಜೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹರಡಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಯಾವೂದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸುದ್ಧಿ ವಾಹಿನಿಗಳು ಈ ವೃದ್ಧೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ.

ಈ ಪ್ರಕರಣದ ಬಗ್ಗೆ ಜಿಲ್ಲಾಡಳಿತ ಇದುವರೆಗೆ ಯಾವೂದೇ ಮಾಹಿತಿ ನೀಡದಿದ್ದರೂ…. ಸುದ್ಧಿ ವಾಹಿನಿಗಳಲ್ಲಿ ಈ ಬಗ್ಗೆ ಹಾಟ್ ನ್ಯೂಸ್ ಬರಲು ಕಾರಣ, ಬೋಳೂರು ಪ್ರದೇಶದಲ್ಲಿ ಪೊಲೀಸರು ಮಾಡಿರುವ ಮಿಂಚಿನ ಕಾರ್ಯಾಚರಣೆ.

ಅದೇನೆಂದರೆ.. ಸಾವಿನ ವದಂತಿ ಹರಡುತ್ತಲೇ ಪೂಲೀಸರು ಬೋಳೂರಿನ ವೃದ್ಧೆ ಮನೆಯ ಸುತ್ತಮುತ್ತಲಿನ ಪ್ರದೇಶದ ಎಲ್ಲಾ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿ ಈ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ.

ಮಾತ್ರವಲ್ಲದೇ ಬೋಳೂರು ಪ್ರದೇಶದಲ್ಲಿ ತೀವ್ರಾ ನಿಗಾ ವಹಿಸಲಾಗಿದ್ದು, ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡಿ ಜನರು ಮನೆಯಿಂದ ಹೊರ ಬಾರದಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ.ವಿ ಮಾಧ್ಯಮಗಳು ಈ ಬಗ್ಗೆ ಅಧಿಕೃತ ಮಾಹಿತಿ ಬರುವ ಮುನ್ನವೇ ಕೊರೋನಾ ಸೋಕಿನಿಂದ ವೃದ್ಧೆಯೊಬ್ಬರು ಮೃತಪಟ್ಟಿರುವುದಾಗಿ ವರದಿ ಮಾಡಿದೆ.

ಆದರೆ ಸ್ಪಷ್ಟವಾದ ಮಾಹಿತಿಯನ್ನು ಜಿಲ್ಲಾಡಳಿತ ಇನ್ನಷ್ಟೇ ನೀಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಮೊನ್ನೆಯಷ್ಟೇ ರೆಡ್ ಝೋನ್ ನಿಂದ ಆರೆಂಜ್ ಝೋನ್ ಆಗಿತ್ತು. ಇದೀಗ ಈ ಪ್ರಕರಣದಿಂದ ಲಾಕ್ ಡೌನ್ ಸಡಿಲಿನ ಬಗ್ಗೆ ಜಿಲ್ಲೆಯ ಜನರು ಮತ್ತಷ್ಟು ದಿನ ಕಾಯಬೇಕಾಗ ಬಹುದು.

Comments are closed.