ಕರಾವಳಿ

ಕೋರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ: 108 ತುರ್ತುಸೇವೆ ಸಿಬ್ಬಂದಿಗಳ ಸೇವೆಗೆ ಮೆಚ್ಚುಗೆ

Pinterest LinkedIn Tumblr

ಮಂಗಳೂರು  : ದ.ಕ. ಜಿಲ್ಲೆ ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ನೂರಾರು 108 ಸಿಬ್ಬಂದಿಗಳು ತಮ್ಮ ಪ್ರಾಮಾಣಿಕ ಸೇವಾ ಮನೋಭಾವನೆಯಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕೋವಿಡ 19 ವೈರಸ್ ಗಂಭೀರತೆಯನ್ನು ಅರಿತು 108 ಸೇವೆಯ ಅಂಬುಲೆನ್ಸ್ ಚಾಲಕರು ಹಾಗೂ ಶುಶ್ರೂಷಕರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿಷ್ಠೆಯನ್ನು ಮೆರೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ

ತಮ್ಮ ಕುಟುಂಬವನ್ನು ಬಿಟ್ಟು ಅಪಾಯದ ಅರಿವಿದ್ದರೂ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೋರೋನ ವೈರಸ್ ವಿರುದ್ಧ ಹೋರಾಟದಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬದ್ಧತೆಯಿಂದ ಸೇವೆಸಲ್ಲಿಸುವ ಎಲ್ಲ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಲಾಗಿದ್ದು ಕೋರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ 19 ತಾಲೂಕಿಗೆ ಒಂದರಂತೆ ಒಟ್ಟು ದ.ಕ ಜಿಲ್ಲೆಯಲ್ಲಿ 6 ಆಂಬುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದು 108 ಜಿಲ್ಲಾ ವ್ಯವಸ್ಥಾಪಕರು ಆಗಿರುವ ಮಹಾಬಲ ತಿಳಿಸಿದ್ದಾರೆ.

Comments are closed.