ಮಂಗಳೂರು ಏಪ್ರಿಲ್ 18 : ದ.ಕ ಜಿಲ್ಲೆಯ ಕೆಲವೊಂದು ಆಸ್ಪತ್ರೆಗಳು/ ಕ್ಲಿನಿಕ್/ ಲ್ಯಾಬೋರೋಟರಿ/ ಹೋಮಿಯೋಪತಿ ಕ್ಲಿನಿಕ್ ಹಾಗೂ ಇತರ ಸಂಸ್ಥೆಗಳು ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಾವಣೆ ಆಗದೇ ಅನಧಿಕೃತವಾಗಿ ನಡೆಸುತ್ತಿರುವುದು ಕಂಡು ಬಂದಿರುತ್ತದೆ.
ಹಾಗೆಯೇ ಕೆಲವೊಂದು ಆಸ್ಪತ್ರೆಗಳು/ ಕ್ಲಿನಿಕ್/ ಲ್ಯಾಬೋರೋಟರಿಗಳು ಮತ್ತು ಇತರ ಸಂಸ್ಥೆಗಳು ನೋಂದಾವಣೆಗೊಂಡು 5 ವರ್ಷ ಮೀರಿದರೂ ಸಹ ನವೀಕರಣ ಆಗದೇ ಇರುವುದು ಕಂಡು ಬಂದಿರುತ್ತದೆ. ಆದ್ದರಿಂದ ನೋಂದಾವಣೆಗೊಳ್ಳದ ಹಾಗೂ ನವೀಕರಣಗೊಳ್ಳದೇ ಇರುವ ಸಂಸ್ಥೆಗಳು ಕೂಡಲೇ ಆನ್‍ಲೈನ್ ಮುಖಾಂತರ ನೋಂದಾವಣೆ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ನೋಂದಾವಣೆ/ ನವೀಕರಣಗೊಳಿಸದೇ ಇರುವ ಸಂಸ್ಥೆಗಳನ್ನು ಕೆ.ಪಿ.ಎಂ.ಇ ಆಕ್ಟ್ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.