ಕರಾವಳಿ

ಕೇರಳ ಕೊವಿಡ್-19ನ್ನು ಜಗ್ಗಿಸಿದೆಯೇ? : ಎಲ್ಲೆಡೆ ಈಗ ಕೇಳಿ ಬರುತ್ತಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ

Pinterest LinkedIn Tumblr

ಕೇರಳ ಕೊವಿಡ್-19ನ್ನು ಜಗ್ಗಿಸಿದೆಯೇ? ಮಾಧ್ಯಮಗಳಲ್ಲಿ ಹಾಗೂ ಎಲ್ಲೆಡೆ ಈಗ ಕೇಳಿ ಬರುತ್ತಿರುವ ಪ್ರಶ್ನೆ. ಇದಕ್ಕೆ ಕಾರಣವಿದೆ, ಇಡೀ ದೇಶದಲ್ಲಿ ಮೂರು ವಾರಗಳ ಲಾಕ್ ಡೌನ್ ಮುಗಿಯುತ್ತಿದ್ದರೂ, ಸೋಂಕು ಪತ್ತೆಯಾದವರ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದ್ದರೆ, ಕೇರಳದಲ್ಲಿ ಅದು ಗಮನಾರ್ಹವಾಗಿ ಇಳಿಯುತ್ತಿದೆ ಎಂದು ಕೇಂದ್ರ ಸರಕಾರವೇ ಪ್ರಕಟಿಸಿರುವ ಅಂಕಿ-ಅಂಶಗಳೇ ಹೇಳುತ್ತಿವೆ.

ಕೇರಳ ಕೊವಿಡ್-19ರ ವಿರುದ್ಧ ಭಾರತೀಯರ ಸಮರವನ್ನು ಆರಂಭಿಸಿದ ಮೊದಲ ರಾಜ್ಯ. ಈ ಸಮರದಲ್ಲಿ ಈಗಲೂ ಅದು ಮುಂಚೂಣಿಯಲ್ಲಿದೆ.

ಡಬ್ಲ್ಯು.ಹೆಚ್.ಒ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಹಾಗೂ ಕೇಂದ್ರ ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನಗಳು ಬಂದ ಕೂಡಲೇ ಜನವರಿ 18, 2020 ರಿಂದಲೇ ಅದನ್ನು ಎದುರಿಸುವ ಕಾರ್ಯಾಚರಣೆ ಆರಂಭಿಸಿತು. ಅದರಿಂದಾಗಿ ದೇಶದಲ್ಲಿ ಮೊದಲ ಸೋಂಕು ಪತ್ತೆಯಾದದ್ದು ಕೇರಳದಲ್ಲೆ ಜನವರಿ 30ರಂದು.

ಆ ವೇಳೆಗಾಗಲೇ ಎಲ್ಲ 14 ಜಿಲ್ಲೆಗಳಲ್ಲೂ ಕೊವಿಡೊ ನಿಯಂತ್ರಣ ಕೊಠಡಿಗಳು ಕಾರ್ಯಾರಂಭ ಮಾಡಿದ್ದವು. ಅಂದಿನಿಂದ ಪ್ರತಿ ದಿನ ಸ್ವತಃ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಮಂತ್ರಿಗಳೇ ಪತ್ರಿಕಾ ಗೋಷ್ಠಿಗಳಲ್ಲಿ ಮಾಹಿತಿಗಳನ್ನು ಕೊಡುತ್ತಿದ್ದಾರೆ.

ಬೇರೆಡೆಗಳಲ್ಲಿ ‘ಸಾಮಾಜಿಕ ಅಂತರ’ದ ಮಾತು ಇದ್ದರೆ, ಇಲ್ಲಿ “ದೈಹಿಕ ಅಂತರ- ಸಾಮಾಜಿಕ ಐಕ್ಯತೆ” ಯ ಕರೆಯೊಂದಿಗೆ ಕೊರೊನ ವೈರಾಣುವಿನ ಪ್ರಸರಣವನ್ನು ತಡೆಯಲು “ಬ್ರೇಕ್ ದಿ ಚೈನ್’” ಪ್ರಚಾರಾಂದೋಲನದ ಮೂಲಕ ಸೋಂಕಿನ ಪ್ರಸರಣವನ್ನು ತಡೆಗಟ್ಟುವ ವ್ಯಾಪಕ ಪ್ರಯತ್ನವನ್ನು ನಡೆಸಲಾಯಿತು.

ಆದರೆ ಆಗನಿರ್ದೇಶನಗಳನ್ನು ಕಳಿಸಿದ್ದ ಕೇಂದ್ರ ಸರಕಾರ ನಮಸ್ತೆ ಟ್ರಂಫ್ ಸಂಭ್ರಮದಲ್ಲಿ ಮಗ್ನವಾಗಿತ್ತು.

ಆದ್ದರಿಂದ ಸೋಂಕು ಪತ್ತೆಯಾದ ಸಂಖ್ಯೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿತ್ತು.

ಮಾರ್ಚ್ 11 ರಂದು ಡಬ್ಲ್ಯು.ಹೆಚ್.ಒ ಇದು ಮಹಾಮಾರಿ(ಪಾಂಡೆಮಿಕ್) ಎಂದು ಘೋಷಿಸಿತು.

ಆಗಲೂ ಮಾರ್ಚ್ 13 ರಂದೂ ಕೇಂದ್ರ ಆರೋಗ್ಯ ಮಂತ್ರಾಲಯ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇನ್ನೂ ಇಲ್ಲ ಎಂದಿತು.ಆಗ ಆಳುವ ಪಕ್ಷ ಮಧ್ಯಪ್ರದೇಶದಲ್ಲಿ ಚುನಾಯಿತ ಸರಕಾರವನ್ನು ಉರುಳಿಸಲು ಶಾಸಕರನ್ನು ಮುಂಬೈಗೆ ಒಯ್ಯುವುದರಲ್ಲಿ ಮಗ್ನವಾಗಿತ್ತು.

ಪ್ರಧಾನ ಮಂತ್ರಿಗಳು ಕೊವಿಡ್-19ರ ಬಗ್ಗೆ ದೇಶವನ್ನುದ್ದೇಶಿಸಿ ಮೊದಲ ಪ್ರಸಾರ ಭಾಷಣ ಮಾಡಿದ್ದು ಮಾರ್ಚ್ 19ರಂದು.

ಈ ನಡುವೆ ಮಾರ್ಚ್ 14 ರಂದು ಪತ್ತೆಯಾದ 90 ಕೇಸುಗಳಲ್ಲಿ 21 ಕೇರಳದ್ದಾಗಿದ್ದು, ಮಹಾರಾಷ್ಟ್ರದಲ್ಲೂ ಆ ವೇಳೆಗೆ 21 ಸೋಂಕುಗಳು ಪತ್ತೆಯಾಗಿದ್ದವು. ಮಾರ್ಚ್ 15 ರಂದು ಮೊದಲ ಬಾರಿಗೆ ಕೇರಳ ಮೊದಲ ಸ್ಥಾನದಿಂದ ಕೆಳಗಿಳಿಯಿತು. ಮಹಾರಾಷ್ಟ್ರಮೊದಲ ಸ್ಥಾನಕ್ಕೇರಿತು.

ಮಾರ್ಚ್ 28ರಂದು ಕೇರಳದಲ್ಲಿ ಮೊದಲ ಕೊವಿಡ್ ಸಾವು ಸಂಭವಿಸಿತು. ಅದರೆ ಆ ವೇಳೆಗಾಗಲೇ ದೇಶದ ಇತರೆಡೆಗಳಲ್ಲಿ 20 ಸಾವುಗಳು ಸಂಭವಿಸಿದ್ದವು.

ನಂತರ ಎಪ್ರಿಲ್ 1 ರವರೆಗೂ ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಮಹಾರಾಷ್ಟ್ರ ಮತ್ತು ಕೆರಳವೇ ಇದ್ದವು. ಮಹಾರಾಷ್ಟ್ರ ಈಗಲೂ 2334 ರೊಂದಿಗೆ ಮೊದಲ ಸ್ಥಾನದಲ್ಲೇ ಇದೆ. ಕೆರಳ 378ರೊಂದಿಗೆ ಹತ್ತನೇ ಸ್ಥಾನದಲ್ಲಿದೆ.

ಎಪ್ರಿಲ್ 1 ರಂದು ಕೇರಳ ಮೂರನೇ ಸ್ಥಾನಕ್ಕೆ ಇಳಿಯಿತು. ಎಪ್ರಿಲ್ 2 ರಂದು 4 ನೇಸ್ಥಾನಕ್ಕೆ, 5 ರಂದು 5ನೇಸ್ಥಾನಕ್ಕೆ, 7 ರಂದು 7ನೇ ಸ್ಥಾನಕ್ಕೆ, 8ರಂದು 9 ನೇಸ್ಥಾನಕ್ಕೆ ಮತ್ತು ಎಪ್ರಿಲ್ 10ರಂದು 10ನೇ ಸ್ಥಾನಕ್ಕೆ ಇಳಿದಿದೆ.

• ದೇಶದಲ್ಲಿ ಸೋಂಕುಪತ್ತೆಯ ಕೆಲಸ ಈಗಲೂ ಬಹಳ ಸೀಮಿತವಾಗಿಯೇ ನಡೆಯುತ್ತಿದೆ. ಅದಕ್ಕೆ ಹೋಲಿಸಿದರೆ ಕೇರಳದಲ್ಲಿ ಅದು ಹೆಚ್ಚು ವ್ಯಾಪಕವಾಗಿ ನಡೆಯುತ್ತಿದೆ.

• ಕೇರಳದ ಜನಸಂಖ್ಯೆ ದೇಶದ ಜನಸಂಖ್ಯೆಯ 2.5ಶೇ.ದಷ್ಟು, ಆದರೆ ಇದುವರೆಗೆ ಆಗಿರುವ ಸೋಂಕು ತಪಾಸಣೆಯಲ್ಲಿ 7.5% ದಷ್ಟು ಕೇರಳದಲ್ಲೇ ಆಗಿದೆ.

• ಇಡೀ ದೇಶದಲ್ಲಿ ಈಗ ಮೂರುವಾರಗಳ ಲಾಕ್ ಡೌನ್ ಕೊನೆಯಲ್ಲಿ ಸೋಂಕು ಪತ್ತೆಯಾದವರ ಸಂಖ್ಯೆ ಸುಮಾರು 10ಶೇ. ದರದಲ್ಲಿ ಏರುತ್ತಿದ್ದರೆ, ಕೇರಳದಲ್ಲಿ ಹೆಚ್ಚು ವ್ಯಾಪಕವಾದ ಪತ್ತೆ ಪ್ರಯತ್ನ ನಡೆದಾಗಿಯೂ ಆ ಪ್ರಮಾಣ ಇದೀಗ 2ಶೇ.ಕ್ಕೆ ಇಳಿದಿದೆ.

ಅಂದರೆ ಕೇರಳದ ಮಾದರಿಯನ್ನು ಅನುಸರಿಸಿದ್ದರೆ ಸಂಪೂರ್ಣ ಲಾಕ್‌ಡೌನ್ ಮುಂದುವರೆಸುವ,ಜನಗಳ ಸಂಕಷ್ಟಗಳನ್ನು ಮುಂದುವರೆಸುವ ಅಗತ್ಯವಿರುತ್ತಿರಲಿಲ್ಲ.

• ಇಡೀ ದೇಶದಲ್ಲಿ ಮೊದಲ ಬಾರಿಗೆ ಕೊರೊನವೈರಸ್ ಸೋಂಕು ಕೇರಳದಲ್ಲೇ ದಾಖಲಾಗಿದ್ದರೂ ಇದುವರೆಗೆ ದಾಖಲಾಗಿರುವ ಕೊವಿಡ್ 324 ಸಾವುಗಳಲ್ಲಿ ಕೇರಳದಲ್ಲಿ ಆಗಿರುವುದು 3 ಮಾತ್ರ., ಅಂದರೆ 1ಶೇ.ಕ್ಕಿಂತಲೂ ಕಡಿಮೆ.

• ಸೋಂಕುತಗಲಿದವರ ಸಂಖ್ಯೆಗೆ ಹೋಲಿಸಿದರೆ ಸಾವುಗಳ ಪ್ರಮಾಣ ಇಡೀ ದೇಶದಲ್ಲಿ ಸುಮಾರು3.5 ಶೇ., ಕೇರಳದಲ್ಲಿ ಅದು 0.8%.

• ಸೋಂಕು ಪತ್ತೆಯಾದವರಲ್ಲಿ ಗುಣಮುಖರಾದವರ ಪ್ರಮಾಣ ದೇಶದಲ್ಲಿ ಸುಮಾರು 11ಶೇ. ಇದರಲ್ಲಿ ಈಗ 50%ವನ್ನು ದಾಟಿದೆ.

ಅಂದರೆ ಗುಣಮುಖರಾದವರ ಸಂಖ್ಯೆ ಶುಶ್ರೂಷೆ ಪಡೆಯುವವರ ಸಂಖ್ಯೆಗಿಂತ ಹಚ್ಚಾಗಿರುವ ಮೊದಲ ರಾಜ್ಯ ಕೇರಳ ಎಂಬ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ.

ಆದರೂ, ಸಮರ ಇನ್ನೂ ಮುಗಿದಿಲ್ಲ, ನಾವು ಎಚ್ಚರದಿಂದಲೇ ಇರುತ್ತೇವೆ, ನಮ್ಮ ಕೆಲಸಗಳನ್ನು ಮುಂದುವರೆಸುತ್ತೇವೆ ಎಂದು ಕೇರಳದ ಆರೋಗ್ಯ ಮಂತ್ರಿ ಶ್ರೀಮತಿ ಶೈಲಜಾ ಟೀಚರ್ ಹೇಳಿದ್ದಾರೆ.

ಕೃಪೆ :ವಾಟ್ಸ್ ಆಪ್

Comments are closed.