ಕರಾವಳಿ

ಖಾಸಗಿ ವಾಹನಕ್ಕೆ ನಿರ್ಬಂಧ : ದ.ಕ. ಜಿಲ್ಲೆಯಾದ್ಯಂತ ಬಂದ್‌ ವಾತಾವರಣ

Pinterest LinkedIn Tumblr

ಮಂಗಳೂರು, ಎಪ್ರಿಲ್.03: ಸಂಪೂರ್ಣ ಲಾಕ್‌ಡೌನ್‌ ಆದೇಶಕ್ಕೆ ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸಿರುವುದರಿಂದ ಶುಕ್ರವಾರವೂ ಜಿಲ್ಲೆಯಾದ್ಯಂತ ಬಂದ್‌ ವಾತಾವರಣವಿತ್ತು. ರಸ್ತೆಗೆ ಯಾವುದೇ ಖಾಸಗಿ ವಾಹನಗಳು ಇಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ ಕಾರಣದಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು.

ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಅಗತ್ಯ ವಸ್ತು ಪೂರೈಕೆಯ ಅಂಗಡಿ ಮುಂಗಟ್ಟುಗಳು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿರುವುದರಿಂದ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿದ್ದರಿಂದ ಜನ ಸಂಚಾರ ವಿರಳವಾಗಿತ್ತು. ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿತ್ತು. ಜನರು ಸಂಪೂರ್ಣ ಬಂದ್‌ಗೆ ಹೊಂದಿಕೊಂಡಿದ್ದು, ಮನೆಗಳಲ್ಲೇ ಉಳಿದರು. ಮನೆಯೊಳಗೆ ಇದ್ದು, ಕೋವಿಡ್‌ 19 ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದರು.

ಇಂದು ಮಂಗಳೂರಿನಲ್ಲಿ ಯಾವುದೇ ಖಾಸಗಿ ವಾಹನಗಳಿಗೆ ನಗರ ಪ್ರವೇಶಕ್ಕೆ ಪೋಲಿಸರು ಅವಾಕಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಖಾಲಿ ಖಾಲಿಯಾಗಿದ್ದು ಜನ ಸಂಚಾರ ವಿರಳವಾಗಿತ್ತು.

ಉಳ್ಳಾಲ ಸಮೀಪ ತೊಕ್ಕೋಟ್ಟು ಪರಸರದಲ್ಲಿ ಹಾಲು ಹಾಗು ಸಣ್ಣಪುಟ್ಟ ಅಂಗಡಿಗಳು ಬೆಳ್ಳಿಗ್ಗೆ ತೆರೆದಿದ್ದು ಜನ ಸಂಚಾರ ವಿರಳವಾಗಿತ್ತು. ರಸ್ತೆಯಲ್ಲಿ ವಾಹನ ಸಂಚಾರ ಕೂಡ ಬಹಳ ಕಡಿಮೆಯಾಗಿತ್ತು. ಮಂಗಳೂರಿನ ಜಪ್ಪುಮಾರ್ಕೆಟ್ ಹಾಗು ಪರಿಸರದಲ್ಲಿ ಹಾಲಿನಂಗಡಿ ಹಾಗು ಹಣ್ಣಿನ ಅಂಗಡಿಗಳು ತೆರೆದಿದ್ದು ಮುಂಜಾನೆ ಸ್ಥಳೀಯರಿಂದ ವ್ಯಾಪರ ಜೋರಾಗಿತ್ತು. ಪಾಂಡೇಶ್ವರ ಪರಿಸರದಲ್ಲಿ ಕೆಲವರು ರಸ್ತೆ ಬದಿಯಲ್ಲಿ ವ್ಯಾಪರ ಮಾಡುತ್ತಿದ್ದು ಸಾರ್ವಜನಿಕರು ಮುಗಿ ಬಿದ್ದು ಖರದೀಸುವುದು ಕಂಡು ಬಂತು.

ಬಿ.ಸಿ. ರೋಡ್‌, ಪುತ್ತೂರು, ಸುಳ್ಯ ಪೇಟೆಗಳಲ್ಲಿಯೂ ಬಂದ್‌ಗೆ ಉತ್ತಮ ಸ್ಪಂದನೆ ದೊರೆತಿದೆ. ಬೆಳ್ತಂಗಡಿಯಲ್ಲಿ ಮಾತ್ರ ಸಂತೆ ಮಾರು ಕಟ್ಟೆಯಲ್ಲಿ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರೂ ತಹಶೀಲ್ದಾರ್‌ ಅವರ ಸಕಾಲಿಕ ಕ್ರಮದ ಬಳಿಕ ಸ್ಥಗಿತಗೊಂಡಿತು.

Comments are closed.