ಕರಾವಳಿ

ಮಂಗಳೂರಿನಲ್ಲಿ ಮತ್ತೆ 4 ಮಂದಿಗೆ ಕೋರೋನಾ ದೃಢ

Pinterest LinkedIn Tumblr

ಮಂಗಳೂರು ಮಾರ್ಚ್ .24: ಮಂಗಳೂರಿನಲ್ಲಿ ಇಂದು ನಾಲ್ಕು ಮಂದಿಗೆ ಕೋರೋನಾ ದೃಢ ಪಟ್ಟಿದೆ. ಇವರಲ್ಲಿ 3 ಮಂದಿ ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ವಿಮಾನದಲ್ಲಿ ಬಂದವರು ಎಂದು ತಿಳಿದು ಬಂದಿದೆ.

ಕೋರೋನಾ ದೃಢಪಟ್ಟಿರುವ ನಾಲ್ವರಲ್ಲಿ 3 ಮಂದಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಹಾಗೂ ಓರ್ವ  KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಮಂಗಳೂರಿನಲ್ಲಿ ಒಟ್ಟು ಐದು ಮಂದಿಗೆ ಕೋರೋನಾ ದೃಢಪಟ್ಟಿದೆ.

ಮಾರ್ಚ್ .22ರಂದು ಮಂಗಳೂರಿನಲ್ಲಿ ಮೊದಲ ಪ್ರಕರಣ ದಾಖಲು:

ಇತ್ತೀಚಿಗೆ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ (22 ವಯಸ್ಸು) ಕೊರೊನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ವ್ಯಕ್ತಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ  ಐಸೋಲೇಶನ್
ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದವರು ತಿಳಿಸಿದ್ದರು.

ಸೋಂಕಿತ ವ್ಯಕ್ತಿ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5:45ಕ್ಕೆ ದುಬೈಯಿಂದ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ಲಕ್ಷಣಗಳನ್ನು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಅಂಬುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭಾನುವಾರ ಪಾಸಿಟಿವ್‌‌‌‌ ರಿಪೋರ್ಟ್‌ ದೊರೆತಿದ್ದು ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿಸಿ ತಿಳಿಸಿದ್ದರು.

ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹಾಗಾಗಿ ಇತರ ಜನರು ಅವರ ಸಂಪರ್ಕದಲ್ಲಿರುವ ಸಾಧ್ಯತೆಯಿಲ್ಲ. ಆದರೆ ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ದ.ಕ.ಜಿಲ್ಲೆಯಲ್ಲಿ ಕೊರೊನ ವೈರಸ್ ಅನ್ನು ಹತ್ತಿಕ್ಕುವಲ್ಲಿ ಜಿಲ್ಲಾಡಳಿತ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಮಾಹಾಮಾರಿ ವ್ಯಾಪಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮಗಳ ಮೂಲಕ ಮುಂಜಾಗ್ರತೆ ಕೈಗೊಂಡಿದೆ.

Comments are closed.