ಮಂಗಳೂರು : ಕೊರೊನಾ ಬಗ್ಗೆ ಯಾವುದೇ ಖಚಿತವಿಲ್ಲದ ಮತ್ತು ಸುಳ್ಳು ಸುದ್ದಿ ಹಬ್ಬಿಸಿದರೆ ಅದು ಕಾನೂನು ಪ್ರಕಾರ ಅಪರಾಧ ಎಂದು ಮಂಗಳೂರಿನ ಹಿರಿಯ ವಕೀಲರಾದ ಶಶಿರಾಜ್ ರಾವ್ ಕಾವೂರು ಅವರು ಎಚ್ಚರಿಸಿದ್ದಾರೆ.
1. ಕೊರೋನಾಗೆ ಲಸಿಕೆ ಸಿಕ್ಕಿದೆ,
2. ಹೀಗೊಂದು ಆಯುರ್ವೇದಿಕ್, ಹೋಮಿಯೋಪತಿ ಮದ್ದಿದೆ,
3. ಇದೋ ನೋಡಿ ಕೋರೋನ ಸೋಂಕಿತ ಆಸ್ಪತ್ರೆಯಲ್ಲಿ ಮಲಗಿದ್ದಾನೆ,
4. ಕೊನೆ ಉಸಿರು ಎಳೆಯುತ್ತಿರುವ ರೋಗಿಯ ವೀಡಿಯೋ ನೋಡಿ,
5. ನಾಳೆ ಮದ್ದು ಸಿಂಪಡಿಸುತ್ತಾರೆ, ಹೊರ ಬರಬೇಡಿ,
6. ಇಂತಹ ಕಡೆಯಲ್ಲಿ ರೋಗದ ವೈರಸ್ ಇದೆ, ಅಲ್ಲಿಗೆ ಹೋಗಬೇಡಿ,
7. ನಾಳೆಯಿಂದ ಈ ವಸ್ತು ಸಿಗುವುದಿಲ್ಲ, ಆ ವಸ್ತು ತುಟ್ಟಿಯಾಗುತ್ತದೆ,
8. ನಮ್ಮ ಊರಿನಲ್ಲಿ ರೋಗ ಹರಡುವುದಿಲ್ಲ, ಇಲ್ಲಿ ತಿರುಗಾಡಬಹುದು,
ಇತ್ಯಾದಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ (ಫೇಸ್ ಬುಕ್, ವಾಟ್ಸಾಪ್, ಇತ್ಯಾದಿ) ಹರಡಿಸಿದರೆ ಅದಕ್ಕೆ ಸೈಬರ್ ಕಾಯಿದೆ, ಐಪಿಸಿ ಅನ್ವಯ ಶಿಕ್ಷೆ ಖಂಡಿತ.
ಅದೇ ರೀತಿ,
1. ರೋಗ ಲಕ್ಷಣ ಕಂಡು ಬಂದರೂ ತಿಳಿಸದೇ ಇರುವುದು
2. ಕ್ವಾರಂಟೈನ್ ಕಾಲಾವಧಿಯಲ್ಲೂ ಸಾರ್ವಜನಿಕವಾಗಿ ಅಡ್ಡಾಡುವುದು,
3. ನಿಷೇಧಾಜ್ಙೆ ಜಾರಿಯಲ್ಲಿ ಇರುವಾಗಲೂ ಹೊರಗಡೆ ಗುಂಪಾಗಿ ತಿರುಗುವುದು
4. ಸರಕಾರದ ಆದೇಶದ ಹೊರತಾಗಿಯೂ ಸಭೆ, ಸಮಾರಂಭ, ಮದುವೆ, ಮುಂಜಿ, ತರಗತಿ, ಗೆಟ್ ಟುಗೆದರ್ ಗಳನ್ನು ಮಾಡುವುದು..
ಇವೆಲ್ಲವೂ ಅಪರಾಧ ಎನಿಸಲ್ಪಡುತ್ತದೆ.
ಇವನ್ನು ನಿಮ್ಮ ಆತ್ಮೀಯರ ಗಮನಕ್ಕೂ ತನ್ನಿ.ಪ್ರಬುಧ್ಧ ನಾಗರಿಕರಂತೆ ವರ್ತಿಸಿ. ಮನೆಯಲ್ಲಿರಿ. ಸುರಕ್ಷಿತವಾಗಿರಿ ಎಂದು ಮಂಗಳೂರಿನ ಹಿರಿಯ ವಕೀಲರಾದ ಶಶಿರಾಜ್ ರಾವ್ ಕಾವೂರು ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
Comments are closed.