ಕುಂದಾಪುರ: ರಾಜ್ಯಾದ್ಯಂತ ಕೊರೋನಾ ಭೀತಿ ಹೆಚ್ಚಿರುವ ಹಿನ್ನೆಲೆ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಆದೇಶವೊಂದನ್ನು ಹೊರಡಿಸಿದೆ.


ಸರಕಾರದ ನಿರ್ದೇಶನದಂತೆ ನಾಳೆ (ಮಾ.19) ಗುರುವಾರದಿಂದ ದೇವಸ್ಥಾನದಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ. ಅಲ್ಲದೇ ದೇವರ ಪ್ರಸಾದ, ತೀರ್ಥ ಹಾಗೂ ಹಣ್ಣು ಕಾಯಿ ಸೇವೆ ಇರುವುದಿಲ್ಲ. ಪ್ರತಿ ದಿನ ದೇವಸ್ಥಾನದಲ್ಲಿ ನಡೆಯುತ್ತಿದ್ದ ಅನ್ನದಾನವೂ ಇರುವುದಿಲ್ಲ.
ಪ್ರತಿ ಸೋಮವಾರ ಹಾಗೂ ಗುರುವಾರ ನಡೆಯುವ ದೇವರ ಮೈ ದರ್ಶನ ಸೇವೆವೂ ಇರುವುದಿಲ್ಲ. ಸರಕಾರದ ಮುಂದಿನ ಆದೇಶದವರೆಗೂ ಈ ವ್ಯವಸ್ಥೆ ಬ್ರಹ್ಮಲಿಂಗನ ಆಲಯದಲ್ಲಿ ಮುಂದುವರೆಯಲಿದೆ. ಇದಕ್ಕೆ ಭಕ್ತಾಧಿಗಳು ಸಹಕರಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.