ಕರಾವಳಿ

ಎಸ್‌ಕೆ‌ಎಫ್ ಹಾಗೂ ಸಂಜೀವನಿ ಚಾರಿಟೇಬಲ್ ಟ್ರಸ್ಟ್‌ನಿಂದ ಕಟೀಲು ಕ್ಷೇತ್ರದ ಪರಿಸರದಲ್ಲಿ 5 ಕುಡಿಯುವ ಶುದ್ಧ ನೀರಿನ ಯಂತ್ರ ಸ್ಥಾಪನೆ.

Pinterest LinkedIn Tumblr

ಮಂಗಳೂರು/ಕಟೀಲು: ಮುಂಬೈಯಿಯ ಸಮಾಜ ಸೇವಾ ಸಂಸ್ಥೆ ಸಂಜಿವನ್ ಚಾರಿಟೇಬಲ್ ಟ್ರಸ್ಟ್ ತನ್ನ ಸಮಾಜಮುಖಿ ಸೇವಾ ಯೋಜನೆಯ ಭಾಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಸಾರ್ವಜನಿಕರು ಶುದ್ಧ ನೀರನ್ನು ಬಳಸುವಂತೆ ಪ್ರೇರಿಪಿಸಲು 5 ನೀರು ಶುದ್ಧೀಕರಣ ಯಂತ್ರ( minaral Water purifier machine) ಗಳನ್ನು ಕೊಡುಗೆಯಾಗಿ ನೀಡಿದೆ.

ಸಂಜೀವನಿ ಚಾರಿಟೇಬಲ್ . ಟ್ರಸ್ಟ್ ಮತ್ತು ಎಸ್. ಕೆ. ಎಫ್. ಎಲಿಕ್ಷರ್ ಸಂಸ್ಥೆ ವತಿಯಿಂದ ನೀಡಲಾದ ಕುಡಿಯುವ ಶುದ್ಧ ನೀರಿನ ಯಂತ್ರವನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಲ್ಲಿ ಇತ್ತೀಚಿಗೆ ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅನುವಂಶೀಯ ಅರ್ಚಕರಾದ ಶ್ರೀ ಹರಿನಾರಾಯಣ ಅಸ್ರಣ್ಣ, SKF ನ ಎಂಡಿ ರಾಮಕೃಷ್ಣ ಆಚಾರ, ಸಂಜೀವ ನಿ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಡಾಕ್ಟರ್ ಸುರೇಶ್ ರಾವ್, ಪ್ರಮುಖರಾದ ಜಯಪ್ರಕಾಶ್ ಮಾವಿನಕುಳಿ,,ತೇಜಸ್ ಆಚಾರ ಮತ್ತು ಪ್ರಜ್ವಲ್ ಆಚಾರ ಮುಂತಾದವರು ಉಪಸ್ಥಿತರಿದ್ದರು.

ಈ ನೀರು ಶುದ್ಧೀಕರಿಸುವ ಯಂತ್ರಗಳನ್ನು ಮೂಡ ಬಿದ್ರೆ ಯ ಎಸ್. ಕೆ. ಎಫ್. ಎಲಿಕ್ಷರ್ ಸಂಸ್ಥೆ ಸಂಶೋಧಿಸಿ ತಯಾರಿಸಿದೆ. ಸಂಜೀವಿನಿ ಚಾರಿಟೇಬಲ್ ಟ್ರಸ್ಟ್, ಪ್ಲಾಸ್ಟಿಕ್ ಮುಕ್ತ ಸ್ವಚ ಪರಿಸರವನ್ನು ರಕ್ಷಿಸಿ ಎಂಬ ಧ್ಯೇಯ ದೊಂದಿಗೆ ಸ್ವಚ್ ಕಟೀಲ್ ಪ್ರೊಜೆಕ್ಟ್ ನ ಅಂಗವಾಗಿ ಈ ಯಂತ್ರಗಳನ್ನು ಕಟೀಲು ದೇವಸ್ಥಾನ ಪರಿಸರದಲ್ಲಿ ಅಳವಡಿಸಲಾಗಿದೆ.

5 ಯಂತ್ರಗಳನ್ನು ಕ್ರಮವಾಗಿ ದೇವಸ್ಥಾನದ ಪ್ರಾಂಗಣ, ಭೋಜನ ಶಾಲೆ,ವಿ ಐ ಪಿ ಹಾಲ್, ಬಸ್ ನಿಲ್ದಾಣ ಪರಿಸರ ದ ಸ್ಥಾಪಿಸಲಾಗಿದೆ. ಬಸ್ ನಿಲ್ದಾಣ ದಲ್ಲಿ ಇರಿಸಲಾದ ಯಂತ್ರದಲ್ಲಿ 2 ವಿಭಾಗ ಮಾಡ ಲಾಗಿದ್ದು ಒಂದು ಕಡೆಯಲ್ಲಿ ಶುದ್ಧೀಕರಿಸಿದ ಖನಿಜಯುಕ್ತ ನೀರನ್ನು ರೂಪಾಯಿ 1,5,10 ಉಪಯೋಗಿಸಿ ತಮ್ಮದೆ ಹಿತ್ತಾಳೆ, ತಾಮ್ರ, ಸ್ಟೀಲ್ ಪಾತ್ರೆ ಗಳನ್ನ ಬಳಸಿ ಕ್ರಮವಾಗಿ 1ಲೀಟರ್,5 ಲೀಟರ್,20 ಲೀಟರ್ ನ್ನು ಪಡೆಯಬಹುದಾಗಿದೆ.

ಯಂತ್ರದ ಇನ್ನೊಂದು ಬದಿಯಲ್ಲಿ ಸಹ ಶುದ್ಧ ನೀರನ್ನು ತೆಗೆದು ಉಪಯೋಗಿಸ ಬಹುದು.ಪ್ರಧಾನಿ ಮೋದಿಯವರ ಆಶಯದಂತೆ ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ಸ್ವಚ್ಛ್ ಪರಿಸರ ಎಂಬ ಧ್ಯೇಯ ವಾನ್ನೂ ಮನದಲ್ಲಿಟ್ ಕೊಂಡು, ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲ್ ಬಳಸದೆ ಹಿತ್ತಾಳೆ ತಾಮ್ರ ಮತ್ತು ಸ್ಟೀಲ್ ಫ್ಲಾಸ್ಕ್ ಗಾಳನ್ನ ಉಪಯೋಗಿಸಿಕೊಂಡು ಶುದ್ಧೀಕರಿಸಿದ ಖನಿಜಯುಕ್ತ ನೀರನ್ನು ಬಳಸಲು ಪ್ರೇರೇಪಿಸಲಾಗುತಿದೆ ಎಂದು SKF ನ ಎಂಡಿ ರಾಮಕೃಷ್ಣ ಆಚಾರ್ ತಿಳಿಸಿದರು.

Comments are closed.