ಉಳ್ಳಾಲ,ಮಾರ್ಚ್.9: ರೈಲ್ವೇ ಹಳಿಯಲ್ಲಿ ಯುವಕನ ಶವ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಮಾರ್ಗನ್ಸ್ ಗೇಟ್ ಎರಡನೇ ಬ್ರಿಡ್ಜ್ ನಡಿ ಭಾನುವಾರ ತಡರಾತ್ರಿ 1.30 ಸುಮಾರಿಗೆ ಬೆಳಕಿಗೆ ಬಂದಿದೆ.
ಸುಮಾರು 30-35 ವರ್ಷ ಒಳಗಿನ ಯುವಕನ ಮೃತದೇಹ ಇದಾಗಿದೆ. ಸಮೀಪದಲ್ಲೇ ಬ್ಯಾಗ್ ಹಾಗೂ ಅದರೊಳಗೆ ಬಿಸ್ಲರಿ ಬಾಟಲ್ ನಲ್ಲಿ ಮದ್ಯ ಪತ್ತೆಯಾಗಿದೆ. ಧರಿಸಿದ್ದ ಪ್ಯಾಂಟಿನ ಕಿಸೆಯಲ್ಲಿ ತ್ರಿಶ್ಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಪತ್ತೆಯಾಗಿದೆ. ಪಸ್‌ನಲ್ಲಿ ಚಿಲ್ಲರೆ ಹಣ ಬಿಟ್ಟರೆ ಮೊಬೈಲ್ ಕೂಡಾ ಇರಲಿಲ್ಲ. ಕೇರಳದಿಂದ ಬರುವ ರೈಲಿನಿಂದ ಯುವಕ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳೂ ಇವೆ. ಅಥವಾ ರೈಲು ಹಳಿಯಲ್ಲಿ ನಡೆದುಕೊಂಡು ಬಂದು ಆತ್ಮಹತ್ಯೆ ನಡೆಸಿರುವ ಶಂಕೆಯೂ ಇದೆ.
ತಡರಾತ್ರಿ ವೇಳೆ ಗಣೇಶ್ ಆಂಬ್ಯುಲೆನ್ಸ್‌ನ ಗಣೇಶ್ ಇವರು ಸಹಾಯಕ ಜತೆಗೆ 2.00 ವರೆಗೂ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಮಂಗಳೂರು ರೈಲ್ವೇ ಪೊಲೀಸರು ಸಾಥ್ ನೀಡಿದರು. ಸಂಬಂಧಿಕರು ಇದ್ದಲ್ಲಿ ಮಂಗಳೂರು ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
Comments are closed.