ಕರಾವಳಿ

ಕುಂದಾಪುರದ ಬೀಜಾಡಿ, ಬಸ್ರೂರು ಮೂರುಕೈ ಇಸ್ಪೀಟ್ ಕ್ಲಬ್ ಮೇಲೆ ಪೊಲೀಸರ ದಾಳಿ

Pinterest LinkedIn Tumblr

ಕುಂದಾಪುರ: ಭಾನುವಾರ ರಾತ್ರಿ ಸುಮಾರಿಗೆ ಬಸ್ರೂರು ಮೂರುಕೈ ರಿಕ್ರಿಯೇಶನ್ ಕ್ಲಬ್‌‌ನೊಳಗೆ ಇಸ್ಪೀಟ್‌ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ಹದಿನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.

ಕೋಣಿಯ ಗುರುರಾಜ್, ಉಪ್ಪಿನಕುದ್ರುವಿನ ಚಂದ್ರ, ಕುಂದಾಪುರ ವಿಠಲವಾಡಿಯ ಗಣೇಶ್ ಪೂಜಾರಿ, ಗೋಪಾಡಿಯ ನಿತ್ಯಾನಂದ, ಹಂಗಳೂರಿನ ರಾಮ, ಬೀಜಾಡಿಯ ನಾಗರಾಜ್, ತಲ್ಲೂರಿನ ಮಂಜುನಾಥ್ ಪೂಜಾರಿ, ಕುಂದಾಪುರದ ಮೊಹಮ್ಮದ್ ಶಫಿ, ಗುಲ್ವಾಡಿಯ ಜಯರಾಮ, ಅರಾಟೆಯ ಶಿವರಾಮ ಆಚಾರಿ, ಬೀಜಾಡಿಯ ಸಂತೋಷ, ಹಂಗಳುರಿನ ಜಯರಾಮ ಶೆಟ್ಟಿ, ಬ್ರಹ್ಮಾವರ ಚಾಂತಾರಿನ ಶೇಖರ್, ಆನಗಳ್ಳಿಯ ಶ್ರೀನಿವಾಸ್ ಆರೋಪಿಗಳು.

(Raid Photo)

ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್, ಕ್ರೈಂ ವಿಭಾಗದ ಪಿಎಸ್ಐ ರಮೇಶ್ ಆರ್ ಹಾಗೂ ಸಿಬ್ಬಂದಿಗಳಾದ ಜನಾರ್ಧನ, ರಾಘವೇಂದ್ರ, ಚಂದ್ರ ಶೇಖರ ಅವರು ದಾಳಿ ನಡೆಸಿ ಆರೋಪಿಗಳು ಇಸ್ಪೀಟ್ ಜುಗಾರಿಗೆ ಬಳಸಿದ 37,330/- ನಗದು ಬೈಕ್ ಇತರೆ ಪರಿಕರ ವಶಕ್ಕೆ ಪಡೆದಿದ್ದಾರೆ.

ಬೀಜಾಡಿಯಲ್ಲೂ ದಾಳಿ…
ಕೋಟೇಶ್ವರದ ಬೀಜಾಡಿ ವೈ ಜಂಕ್ಷನ್‌ ಸಮೀಪದಲ್ಲಿನ ಶ್ರೀ ದೇವಿ ಪ್ರಸಾದ್‌ ರಿಕ್ರಿಯೇಷನ್‌ ಅಸೋಸಿಯೇಶನ್‌ ಕ್ಲಬ್‌‌ನೊಳಗೆ ಇಸ್ಪೀಟ್‌ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಹಿನ್ನೆಲೆ ಕುಂದಾಪುರ ಸಿಪಿಐ ಗೋಪಿಕೃಷ್ಣ ಕೆ. ಆರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಕೋಟೇಶ್ವರ ಮಠದಬೆಟ್ಟಿನ ಚಂದ್ರಶೇಖರ್ ಶೆಟ್ಟಿಗಾರ್(54) ಬೀಜಾಡಿಯ ಕಿಶೋರ್ ಗಾಣಿಗ (38), ಕುಂದಾಪುರ ಕೋಡಿಯ ರಾಮಚಂದ್ರ ಶೇರಿಗಾರ್ (64), ಬೀಜಾಡಿ ಹೊದ್ರಾಳಿಯ ಸುರೇಶ್ ಶೆಟ್ಟಿಗಾರ್ (40), ಬ್ರಹ್ಮಾವರ ಚೋರಾಡಿಯ ಚಂದ್ರಶೇಖರ ಕುಲಾಲ (52), ಬೀಜಾಡಿಯ ರಾಘವೇಂದ್ರ ಬಳೆಗಾರ, ಕೋಟ ಪಡುಕೆರೆಯ ಮಹಮ್ಮದ್, ತೆಕ್ಕಟ್ಟೆ ರಮೇಶ್ ಪೂಜಾರಿ, ರಘುರಾಮ್ ಶೆಟ್ಟಿ ಆರೋಪಿಗಳು.

ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಸಿಪಿಐ ಕಛೇರಿ ಸಿಬ್ಬಂದಿಗಳಾದ ಸೀತಾರಾಮ , ವಿಕ್ಟರ್‌ ನಜರತ್‌‌ ಮತ್ತು ಕುಂದಾಪುರ ಠಾಣಾ ಸಿಬ್ಬಂದಿಗಳಾದ ಸಚಿನ್‌‌ , ರಾಮ , ಚಾಲಕ ರವೀಂದ್ರ ಜೊತೆಗೆ ದಾಳಿ ನಡೆಸಿ ಕೋಟೇಶ್ವರ ಬೀಜಾಡಿ ವೈ ಜಂಕ್ಷನ್‌ ಸಮೀಪವಿರುವ ಶ್ರೀ ದೇವಿ ಪ್ರಸಾದ್‌ ರಿಕ್ರಿಯೇಷನ್‌ ಅಸೋಸಿಯೇಶನ್‌ ಕ್ಲಬ್‌ ತಲುಪಿ ಅಲ್ಲಿ ಅಂದರ್ ಬಾಹರ್ ಆಟ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಇಸ್ಫೀಟ್‌ ಜುಗಾರಿಗೆ ಬಳಸಿದ್ದ ಒಟ್ಟು ನಗದು ರೂ 15,580/- ನಗದು ಹಾಗೂ 77 ಕಾಯಿನ್‌ ಸಹಿತ ಪರಿಕರ ವಶಕ್ಕೆ ಪಡೆದಿದ್ದಾರೆ.

Comments are closed.