ಕರಾವಳಿ

ಕೊಂಚಾಡಿಯಲ್ಲಿ ನರಸಿಂಹ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

Pinterest LinkedIn Tumblr

ಮಂಗಳೂರು : ನಗರದ ಕೊಂಚಾಡಿಯಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶತಕಲಶಾಭಿಷೇಕ ನೆರವೇರಿತು.

ಶ್ರೀ ಮಹಾಲಸಾ ನಾರಾಯಣಿ ದೇವಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ನರಸಿಂಹ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಸ್ವರ್ಣಕವಚ ಸಮರ್ಪಣೆ ಶ್ರೀಗಳವರ ಅಮೃತ ಹಸ್ತಗಳಿಂದ ಸಮರ್ಪಿಸಲಾಯಿತು. ರಾತ್ರಿ ಸ್ವರ್ಣ ರಥ ಉತ್ಸವ ಶ್ರೀಗಳವರ ಉಪಸ್ಥಿತಿಯಲ್ಲಿ ಸಾವಿರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಎಂ . ಸುರೇಶ್ ಕಾಮತ್ , ಎಚ್ . ಗೋಕುಲದಾಸ್ ನಾಯಕ್ ,ಉರ್ವಿ ರಾಧಾಕೃಷ್ಣ ಶೆಣೈ , ಮಾರೂರ್ ಶಶಿಧರ್ ಪೈ , ಕೆ . ಅಚ್ಚುತ್ ಪೈ . ಎಂ . ವಿಜಯ್ ಪೈ , ಸ್ವರ್ಣ ಕವಚ ಸೇವಾದಾರರಾದ ವೇದಮೂರ್ತಿ ಶ್ರೀ ಎಚ್ . ಯೋಗೀಶ್ ಭಟ್ ಮತ್ತು ಮಕ್ಕಳು ಹಾಗೂ ಶ್ರೀ ಪ್ರೇಮಾನಂದ ಪೈ ಮತ್ತು ಕುಟುಂಬಸ್ಥರು ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಿ . ವಾಸುದೇವ್ ಕಾಮತ್ , ಅರುಣ್ ಕಾಮತ್ ,ಜಿ . ರತ್ನಕರ್ ಕಾಮತ್ , ದೀಪಕ್ ಕುಡ್ವ ,ಡಿ . ವೇದವ್ಯಾಸ್ ಕಾಮತ್ , ಅನಿಲ್ ಕಾಮತ್, ಗಣೇಶ್ ಬಾಳಿಗಾ , ಗುರುಪ್ರಸಾದ್ ಕಾಮತ್ , ಪ್ರಶಾಂತ್ ಪೈ ದೀಪಕ್ಚಂದ್ರ ಬಾಳಿಗಾ , ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.