ಕರಾವಳಿ

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಜಗದೀಶ್ಚಂದ್ರ ಅಂಚನ್ ಆಯ್ಕೆ

Pinterest LinkedIn Tumblr

ಮಂಗಳೂರು : ಸಹಕಾರ ರತ್ನ ‘ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ , ಸುಮಾರು 88 ವರ್ಷಗಳ ಇತಿಹಾಸವನ್ನು ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ನೌಕರರ ಏಕೈಕ ಸಹಕಾರಿ ಸಂಸ್ಥೆ ‘ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ‘ 2020 -2025ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಶ್ರೀ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ದಿವಾಕರ್ ಶೆಟ್ಟಿ ಕಾರ್ಕಳ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಶ್ರೀ ಎಸ್. ಜಗದೀಶ್ಚಂದ್ರ ಅಂಚನ್

ಶನಿವಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್ ಜಗದೀಶ್ಚಂದ್ರ ಅಂಚನ್ ಅಧ್ಯಕ್ಷರಾಗಿಯೂ, ದಿವಾಕರ ಶೆಟ್ಟಿ ಕಾರ್ಕಳ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣೆಯನ್ನು ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿಯ ಅಧಿಕಾರಿ ಶ್ರೀ ನವೀನ್ ಕುಮಾರ್ ಎಂ.ಎಸ್. ಇವರು ನಡೆಸಿಕೊಟ್ಟರು.

ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲೂ 15 ಮಂದಿ ನಿರ್ದೇಶಕರು ಆಯ್ಕೆ ಗೊಂಡಿದ್ದರು. ಶ್ರೀ ಪುಷ್ಪರಾಜ್ ಎಂ.ಎಸ್ , ಶ್ರೀ ರಾಘವ ಆರ್ ಉಚ್ಚಿಲ್, ಶ್ರೀ ದಿವಾಕರ ಶೆಟ್ಟಿ – ಕಾರ್ಕಳ, ಶ್ರೀಮತಿ ಶುಭಲಕ್ಷ್ಮಿ ವಿ.ರೈ , ಶ್ರೀ ವಿಶ್ವೇಶ್ವರ ಐತಾಳ್- ಕುಂದಾಪುರ, ಶ್ರೀ ವಿಶ್ವನಾಥ್ ಎಸ್.ಅಮೀನ್ – ಉಡುಪಿ, ಶ್ರೀ ವಿಶ್ವನಾಥ್ ಕೆ.ಟಿ.- ಸುಳ್ಯ ,ಶ್ರೀ ಜಯಪ್ರಕಾಶ್ ರೈ ಸಿ. – ಪುತ್ತೂರು, ಶ್ರೀ ಗಿರಿಧರ್ – ಬೆಳ್ತಂಗಡಿ , ಶ್ರೀ ಶಿವಾನಂದ ಪಿ – ಬಂಟ್ವಾಳ, ಶ್ರೀ ಅರುಣ್ ಕುಮಾರ್ – ಮಂಗಳೂರು, ಶ್ರೀ ಎಸ್ . ಜಗದೀಶ್ಚಂದ್ರ ಅಂಚನ್, ಶ್ರೀ ಮೋಹನ್ ಎನ್ , ಶ್ರೀಮತಿ ಚಂದ್ರಕಲಾ , ಶ್ರೀಮತಿ ಗೀತಾಕ್ಷಿ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದರು . ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

Comments are closed.