ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ಪಶ್ಚಿಮ ವಾರ್ಡಿನ ಸಮಗ್ರ ಅಭಿವೃದ್ಧಿಗೆ 5.15 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ನೀಡಿದ್ದರು. ಹಾಗಾಗಿ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಯೋಜನೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ 111.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೊಟ್ಟಾರ ಕಲ್ಬಾವಿ ರಸ್ತೆಯ ಸಾಗರ್ ಕೋರ್ಟಿನ ಮುಖ್ಯ ರಸ್ತೆಯ ಸುಂದರ್ ಗಾರ್ಡನ್ ವರೆಗಿನ ರಸ್ತೆ ಅಭಿವೃದ್ಧಿಗೆ 51 ಲಕ್ಷ, ಕೊಟ್ಟಾರ ಇನ್ಫೋಸಿಸ್ ಹಿಂದುಗಡೆ ರಸ್ತೆ ಕಾಂಕ್ರೀಟೀಕರಣಕ್ಕೆ 1.5 ಕೋಟಿ ಹಾಗೂ ತಂತ್ರಿಲೈನ್ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ 10:50 ಲಕ್ಷ ಒದಗಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಮಳೆಹಾನಿ ಪರಿಹಾರ ನಿಧಿಯಿಂದ 25 ಲಕ್ಷ ಅನುದಾನ ಬಿಡುಗೊಳಿಸಿದ್ದು.ಅಬ್ಬಕ್ಕ ಬಡಾವಣೆಯ ಮಣ್ಣಿನ ರಸ್ತೆಗೆ ಡಾಮರೀಕರಣಕ್ಕೆ 5 ಲಕ್ಷ, ಸುಂಕದಕಟ್ಟೆ ಬಳಿ ತಡೆಗೋಡೆ ದುರಸ್ತಿ ಕಾಮಗಾರಿ 5 ಲಕ್ಷ, ದೇರೆಬೈಲ್ ಸುಂಕದಕಟ್ಟೆಯಲ್ಲಿ ತಡೆಗೇಡೆ ಕಚನೆ ಕಾಮಗಾರಿಗೆ 5 ಲಕ್ಷ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಹೊರ ಭಾಗದ ತಡೆಗೋಡೆ ರಚನೆ ಕಾಮಗಾರಿಗೆ 5 ಲಕ್ಷ, ಅಬ್ಬಕ್ಕನಗರ ಬಳಿ ಚರಂಡಿ ದುರಸ್ತಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ಅನುದಾನ ಒದಗಿಸಲಾಗಿದೆ.
ಮುಖ್ಯಮಂತ್ರಿ ವಿಶೇಷ ಅನುದಾನದಡಿ 20.44 ಲಕ್ಷ ಮೀಸಲಿಡಲಾಗಿದೆ. ಅಶೋಕನಗರ ಹೈೂಗೆಬೈಲ್ ಬಳಿ ಚರಂಡಿಯ ಬದಿಗೋಡೆ ನಿರ್ಮಾಣ ಕಾಮಗಾರಿಗೆ 11.35 ಲಕ್ಷ, ಸುಂಕದಕಟ್ಟೆಯ ಬಳಿ ತಡೆಗೋಡೆ ರಚನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 9.09 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.
ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಲ್ಲಿ 28.55 ಲಕ್ಷ ಅನುದಾನ ಜೋಡಿಸಲಾಗಿದ್ದು, ಅದರಲ್ಲಿ ಸುಂಕದಕಟ್ಟೆಯಲ್ಲಿ 2 ಕಡೆಗಳಲ್ಲಿ ತಡೆಗೋಡೆ ರಚನೆ ಕಾಮಗಾರಿಗಳಿಗೆ 10 ಲಕ್ಷ, ಸುಂಕದಕಟ್ಟೆಯ ಕಲ್ಲುರ್ಟಿ ದೈವಸ್ಥಾನ ರಸ್ತೆಯ ಬಳಿ ಕುಸಿದ ರಸ್ತೆ ಹಾಗೂ ತಡೆಗೋಡೆ ರಚನೆ ಕಾಮಗಾರಿ 4.60 ಲಕ್ಷ, ಕೊಟ್ಟಾರ ಕಲ್ಬಾವಿ ಅಡ್ಡರಸ್ತೆಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 6.80 ಲಕ್ಷ, ಕಲ್ಬಾವಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 7.15 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪಂಗಡ ನಿಧಿಯಿಂದ 20.45 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಸುಂಕದಕಟ್ಟೆ ಕಾಲೋನಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಗೋಕುಲ ಡೈರಿ ಬಳಿಯ ಚರಂಡಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ, ಉರ್ವಸ್ಟೋರಿನ ಸುಂಕದಕಟ್ಟೆಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿಗೆ 7.45 ಲಕ್ಷ, ಜಮುನ ಕಾಂಪೌಂಡ್ ಬಳಿ ರಸ್ತೆ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ.
ಕೇಂದ್ರ ಸರಕಾರದ 14ನೇ ಹಣಕಾಸು ವ್ಯವಸ್ಥೆಯ ಅನುದಾನದಲ್ಲಿ 9.17 ಲಕ್ಷ ಬಿಡುಗಡೆಯಾಗಿದ್ದು ಅಶೋಕನಗರ ಹೈೂಗೆಬೈಲ್ ರಸ್ತೆಯ ಗುರುಂಪೆ ಪರಿಸರದಲ್ಲಿ ರಸ್ತೆ ಅಭಿವೃಧ್ಧಿ ಕಾಮಗಾರಿಗೆ ಅದನ್ನು ವಿನಿಯೋಗಿಸಲಾಗುವುದು ಎಂದಿದ್ದಾರೆ.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ 2 ಕೋಟಿ ಬಿಡುಗಡೆಗೊಳಿಸಲಾಗಿದೆ. ಸುಂಕದಕಟ್ಟೆ ಕಾಲೋನಿ ಅಭಿವೃದ್ಧಿಗೆ 1 ಕೋಟಿ ಹಾಗೂ ಅಶೋಕನಗರ ಅಸೋಕ ವಿದ್ಯಾಲಯ ಎದುರಿನಿಂದ ಉರ್ವ ವರೆಗೆ ಮುಖ್ಯರಸ್ತೆ ಅಭಿವೃದ್ಧಿಗೆ 1 ಕೋಟಿ ನೀಡಲಾಗಿದೆ. ದೇರೆಬೈಲ್ ಪಶ್ಚಿಮ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಈ ಎಲ್ಲಾ ಅನುದಾನಗಳನ್ನು ಜೋಡಿಸಲಾಗಿದೆ. ಮುಂದಿನ ಅವಧಿಯ ಒಳಗಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

Comments are closed.