ಕರಾವಳಿ

ಹಿಂದೂ ಧರ್ಮ ಶ್ರೇಷ್ಠ ಧರ್ಮ – ಎಲ್ಲಾ ಧರ್ಮದವರಿಗೆ ಆಶ್ರಯ ನೀಡಿರುವುದೇ ಹಿಂದೂ ಸಮಾಜ: ಡಾ. ಕಲ್ಲಡ್ಕ ಪ್ರಭಾಕರ್ ಭಟ್

Pinterest LinkedIn Tumblr

ಮಂಗಳೂರು / ಸುರತ್ಕಲ್ : ಭಾರತದ ಅಂತಸತ್ವವನ್ನು ಇತರ ದೇಶಕ್ಕೆ ತೋರಿಸಿದ್ದು ನಮ್ಮ ಹೆಮ್ಮೆ. ಉಳಿದೆಲ್ಲ ಜಗತ್ತಿಗಿಂತ ಭಿನ್ನವಾಗಿ ಇರುವ ದೇಶ ಭಾರತ. ಎಲ್ಲಾ ರೀತಿಯ ಆಚರಣೆ ಇರುವುದು ಭಾರತದ ದೇಶದಲ್ಲಿ. ಹಿಂದೂ ಸಮಾಜ ಜಗತ್ತಿನ ಎಲ್ಲಾ ಮತಗಳನ್ನು ಒಪ್ಪಿ ಅವರನ್ನು ನಮ್ಮೊಂದಿಗಿರಿಸಿದ ವಿಶಾಲ ಹೃದಯದವರು. ಹಿಂದೂ ಸಮಾಜವೇ ಎಲ್ಲಾ ಧರ್ಮದವರಿಗೆ ಆಶ್ರಯ ನೀಡಿದ್ದೇವೆ ಹೊರತು ಬೇರೆ ಧರ್ಮದವರನ್ನು ಎಂದೂ ವಿರೋಧಿಸಿಲ್ಲ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ನುಡಿದರು.

ಅವರು ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿರುವ ಬ್ರಹ್ಮಕಲಶಾಭೀಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧರ್ಮನೇಮೋತ್ಸವದ ಅಂಗವಾಗಿ ಆದಿತ್ಯವಾರದಂದು ಜರುಗಿದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರ ಜಾಗೃತಿ ಮತ್ತು ಹಿಂದೂ ಹಬ್ಬಗಳು ಕುರಿತಾದ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ, ಇತರರಿಗೆ ಎಂದೂ ಸಂತೋಷವನ್ನು ಉಣಬಣಿಸುವ ಧರ್ಮ ಹಿಂದೂ ಧರ್ಮ. ಸರ್ವೇ ಜನಃ ಸುಖಿನೋ ಭವತುಃ ಎಂಬ ತತ್ವವನ್ನು ಪಾಲಿಸಿದ ಶ್ರೇಷ್ಠ ಧರ್ಮ ಹಿಂದೂ ಧರ್ಮ. ಈ ದೇಶದ ಅಸ್ತಿತ್ವ ಇರುವುದು ಹಿಂದೂ ಸಮಾಜದಿಂದ ಈ ದೇಶಕ್ಕೆ ಗೌರವ ಇರುವುದು ಹಿಂದೂ ಧರ್ಮದಿಂದ ಎಂದು ನುಡಿದರು.

ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಭಗವಂತ ಅಂದರೆ ಸತ್ವದಿಂದ ಹುಟ್ಟಿಕೊಳ್ಳುತ್ತಾನೆ ಭಗವಂತನ ಭಕ್ತಿಯಿಂದ ನಿರಂತರ ಭಜಿಸಿದವನಿಗೆ ಭಗವಂತ ಒಲಿಯುತ್ತಾನೆ. ಅನನ್ಯ ಚಿಂತನೆಯನ್ನು ಮಾಡಿದಾಗ ಮುಖದಲ್ಲಿ ಬ್ರಹ್ಮತೇಜಸ್ಸು ಹುಟ್ಟುತ್ತದೆ. ಮಕ್ಕಳಲ್ಲಿ ಸ೦ಸ್ಕಾರದ ಅರಿವನ್ನು ಮೂಡಿಸಿದಾಗ ಸನಾತನ ಧರ್ಮ ಬೆಳಗುತ್ತದೆ. ತಾಯಿಂದರು ಆಧ್ಯಾತ್ಮವನ್ನು ಮೈಗೂಡಿಸಿಕೊಂಡಾಗ ವಿಶ್ವವೇ ಬೆರಗು ಮೂಡುವಂತೆ ಆಗುತ್ತದೆ. ಸ೦ಸ್ಕಾರದ ಅರಿವಿನ ಬೋಧನೆ ಮಕ್ಕಳಿಗೆ ಇಂದಿನ ಯುಗದಲ್ಲಿ ನೀಡಬೇಕಾಗಿದೆ. ಮನುಷ್ಯ ಬದಲಾಗಬೇಕಾದರೆ ಸ೦ಸ್ಕಾರದ ಗೊಬ್ಬರ ಅಗತ್ಯ ಆಗ ಸ೦ಸ್ಕಾರದ ಫಲ ಬೆಳೆಯಲು ಸಾಧ್ಯ ಎಂದರು.

ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಇಡ್ಯಾ ವಿಠೋಬ ರುಕುಮಾಯಿ ಕ್ಷೇತ್ರ ಅರ್ಚಕ ಗಂಗಾಧರ ಶಾಂತಿ ಅವರು ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ಚಿತ್ತರಂಜನ್ ಗರೋಡಿ ಕಂಕನಾಡಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸತೀಶ್ ಶೆಟ್ಟಿ, ಪಣಂಬೂರು ಡಿಕ್ಸ್  ಶಿಪ್ಪಿಂಗ್ ಮಾಲಕ ದೇವಾನಂದ ಶೆಟ್ಟಿ, ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ಪಿ ಗಣೇಶ್ ಐತಾಳ್, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಕೃಷ್ಣಾಪುರ ಕೂಟ ಮಹಾಜಗತ್ತು ಅಂಗಸ೦ಸ್ಥೆ ಅಧ್ಯಕ್ಷ ವಿಷ್ಣುಮೂರ್ತಿ ಕಾರಂತ, ಖಂಡಿಗೆ ಸಿವಿಲ್ ಗುತ್ತಿಗೆದಾರ ಪಾಂಡುರಂಗ ಪ್ರಭು, ಹೊಸಬೆಟ್ಟು ಶ್ರೀ ರಾಘವೇಂದ್ರ ಮಠ ಅನುವಂಶಿಕ ಆಡಳಿತ ಮೊಕ್ತೇಸರ, ನ್ಯಾಯವಾದಿ ಎಚ್ ವಿ ರಾಘವೇಂದ್ರ, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಸುರತ್ಕಲ್ ಶಶಿಮಂಗಳ ಗ್ಯಾಸ್ ಏಜೆನ್ಸೀಸ್ ಶಶಿಧರ ತಂತ್ರಿ, ಸುರತ್ಕಲ್ ಧನಲಕ್ಷ್ಮೀ ಕನ್ಸ್ಟ್ರಕ್ಷನ್ ರಾಜಾರಾಮ್ ಸಾಲ್ಯಾನ್, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಐ ರಮಾನಂದ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದರು.

ಗೋಪಾಲಕೃಷ್ಣ ಪ್ರಸ್ತಾವಿಕ ಮಾತುಗಳನ್ನಾಡಿದರು.ಸಾವಿತ್ರಿ ಹೆಚ್ ಭಟ್ ಸ್ವಾಗತಿಸಿದರು.

Comments are closed.