ಕರಾವಳಿ

ಪೊಲೀಸ್ ಕ್ಯಾಪ್ ತೊಟ್ಟು ದಂಡ ಹಿಡಿದ ಕುಂದಾಪುರ ಎಸಿ ಪುತ್ರ

Pinterest LinkedIn Tumblr

ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರ ಪುತ್ರ ಶ್ರೀ ಹರ್ಷ ಗಣರಾಜ್ಯೋತ್ಸವ ದಿನವಾದ ಭಾನುವಾರ ಪೊಲೀಸ್ ಆಗಿ ಸಂಭ್ರಮಿಸಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಶ್ರೀ ಹರ್ಷ ತನ್ನ ತಂದೆಯೊಂದಿಗೆ ಬಂದಿದ್ದು ಪರೇಡ್ ಮೊದಲಾದ ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಯೆ ಇದ್ದ ಎಎಸ್ಪಿ ಹರಿರಾಂ ಶಂಕರ್ ಅವರನ್ನು ಕಂಡು ಕೈಕುಲುಕಿ ಮಾತನಾಡಿದ್ದು ಟೋಪಿ ಧರಿಸುವ ಇಂಗಿತ ವ್ಯಕ್ತಪಡಿಸಿದ್ದ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಎಸ್ಪಿ ಹರಿರಾಂ ಶಂಕರ್ ತನ್ನ ಪೊಲೀಸ್ ಕ್ಯಾಪ್ ಹಾಗೂ ದಂಡ (ಪೊಲೀಸ್ ಸ್ಟಿಕ್) ನೀಡಿ ಆತನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪುಟಾಣಿ ಶ್ರೀ ಹರ್ಷ, ತುಂಬಾ ಸಂತೋಷವಾಗಿದೆ. ಮುಂದೆ ಐಎಎಸ್ ಓದಿ ತಂದೆಯಂತೆ ಅಧಿಕಾರಿಯಾಗುವೆ ಎಂದು ಹೇಳಿದ್ದಾನೆ.

ಕುಂದಾಪುರದಲ್ಲಿ ಓಕ್ ವುಡ್ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.