ಕರಾವಳಿ

ಶ್ರೀ ಕ್ಷೇತ್ರ ಕದ್ರಿಗೆ ಪಲಿಮಾರು ಮಠಾಧೀಶರ ಭೇಟಿ

Pinterest LinkedIn Tumblr

ಮಂಗಳೂರು : ಪರ್ಯಾಯ ಪೂರೈಸಿ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ  ಸ್ವಾಮೀಜಿಯವರು‌ಇಂದು ಶ್ರೀ ಕ್ಷೇತ್ರಕದ್ರಿ ಮಂಜುನಾಥದೇವಸ್ಥಾನಕ್ಕೆ ಸಂದರ್ಶನಗೈದರು.

ಪೂಜ್ಯ ಸ್ವಾಮೀಜಿಯವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ‌ಅಧ್ಯಕ್ಷ ಎ. ಜೆ. ಶೆಟ್ಟಿಯವರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಈ ಸಂದರ್ಭಕಲ್ಕೂರ ಪ್ರತಿಷ್ಠಾನದ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ ಸ್ಥಳೀಯ ಕಾರ್ಪೋರೇಟರ್‌ಗಳಾದ ಶ್ರೀಮತಿ ಶಕಿಲಾ ಕಾವ ಹಾಗೂ ಮನೋಹರ ಶೆಟ್ಟಿ, ಅಲ್ಲದೆ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರಿಮತಿ ಜಯಮ್ಮ ಪಿ., ರತ್ನಾಕರಜೈನ್, ಅರ್ಚಕರಾದ ರಾಮಣ್ಣ‌ಅಡಿಗ, ಪ್ರಭಾಕರ‌ಅಡಿಗ, ರಾಘವೇಂದ್ರ‌ಅಡಿಗ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದರಂಜನ್‌ಕುಮಾರ್, ಪುಷ್ಪಲತಾ ಶೆಟ್ಟಿ, ಸುರೇಶ್‌ಕುಮಾರ್‌ಕದ್ರಿ‌ಅಲ್ಲದೆ ಕೃಷ್ಣ ಭಟ್‌ಕದ್ರಿ, ಉಜಿರೆ ವಾಸುದೇವ ಭಟ್, ಪ್ರಭಾಕರರಾವ್ ಪೇಜಾವರ, ಸುಧಾಕರರಾವ್ ಪೇಜಾವರ, ಕ್ಷೇತ್ರದ ಸಿಬ್ಬಂದಿ ಅರುಣ್‌ಕದ್ರಿ, ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರದ‌ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ ಪಲಿಮಾರು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

Comments are closed.