ಕರಾವಳಿ

ಪೊಲೀಸರ ಸೋಗಿನಲ್ಲಿ ಬಂದ ಇಬ್ಬರಿಂದ ಕುಂದಾಪುರದಲ್ಲಿ ಚಿನ್ನಾಭರಣ ಸುಲಿಗೆ!

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜ್ ಬಳಿ ಸೋಮವಾರ ಹಾಡು ಹಗಲಲ್ಲೇ ಬೈಕಲ್ಲಿ ಬಂದು ಅಪರಿಚಿತರಿಬ್ಬರು ಪೊಲೀಸರೆಂದು ಗುರುತು ಚೀಟಿ ತೋರಿಸಿ ೬೦ ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕುಂದಾಪುರ ಮುರಳೀಧರ ಪೈ ಚಿನ್ನಾಭರಣ ಕಳೆದುಕೊಂಡವರು. ಕಪ್ಪು ಬೈಕ್‌ನಲ್ಲಿ ಬಂದ ಇಬ್ಬರು ಆಗುಂತಕರು ಹೂವಿನ ಮಾರುಕಟ್ಟೆ ಬಳಿ ಮುರಳೀಧರ ಪೈ ಅವರಿಗೆ ತಾವು ಪೊಲೀಸರೆಂದು ಅವರಲ್ಲಿದ್ದ ಗುರುತು ಚೀಟಿ (ಐಡಿ ಕಾರ್ಡ್) ತೋರಿಸಿ, ತಪಾಸಣೆ ಮಾಡಬೇಕು ಎಂದು ಮುರಳಿಧರ ಪೈ ಬಳಿಯಿದ್ದ ಚಿನ್ನದ ಉಂಗುರ, ಚಿನ್ನದ ಚೈನ್, ಬ್ರೇಸ್ಲೈಟ್ ಸುಲಿಗೆ ಮಾಡಿದ್ದು, ಚಿನ್ನಾಭರಣಗಳ ಒಟ್ಟು ಮೌಲ್ಯ ೬೦ ಸಾವಿರ ಆಗಿದೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.