ಕರಾವಳಿ

ಮಂಗಳೂರಿನ ಪೋರ್ಟ್ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ 3.87 ಕೋಟಿ ಅನುದಾನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೋರ್ಟ್ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಇಲಾಖೆಗಳಿಂದ 4.32 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಇಲಾಖೆಗಳಿಂದ ಹಾಗೂ ರಾಜ್ಯ ಸರಕಾರದ ಜೊತೆ ಚರ್ಚಿಸಿ ಪೋರ್ಟ್ ವಾರ್ಡಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 19 ಲಕ್ಷ ಅನುದಾನ ನೀಡಲಾಗಿದ್ದು ಹಳೆ ಬಂದರು ರಸ್ತೆಯ ಬಳಿ ಮೀನು ದಕ್ಕೆಗೆ ಹೋಗುವ ದಾರಿಗೆ ಕಾಲುಸಂಕ ಪುನರ್ನಿರ್ಮಾಣ ಕಾಮಗಾರಿಗೆ 10 ಲಕ್ಷ ಹಾಗೂ ಹಳೆ ಬಂದರು ರಸ್ತೆಯ ರೈಲು ಗೂಡ್ಸ್ ಶೆಡ್ ಬಳಿ ಹೋಗುವ ದಾರಿಗೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ 9 ಲಕ್ಷ ಅನುದಾ ನೀಡಲಾಗಿದೆ. ಹಾಗೂ ಈ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಮಳೆಹಾನಿ ಪರಿಹಾರ ನಿಧಿಯಡಿ 13 ಲಕ್ಷ ಅನುದಾನ ಒದಗಿಸಲಾಗಿದ್ದು ಗೂಡ್ ಶೆಡ್ ಮುಖ್ಯರಸ್ತೆ ನೀರೇಶ್ವಾಲ್ಯ ಜಂಕ್ಷನ್`ನಿಂದ ರೈಲ್ವೆ ಗೇಟ್ ವರೆಗೆ ರಸ್ತೆ ದುರಸ್ತಿ ಕಾಮಗಾರಿಗೆ 8 ಲಕ್ಷ ಹಾಗೂ ಜಿಲ್ಲಾಧಿಕಾರಿ ಕಚೇರಿ ಹಿಂಬದಿ ಕಂದುಕಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ಅನುದಾನ ಒದಗಿಸಲಾಗಿದೆ.

ಮೀನುಗಾರಿಕಾ ಇಲಾಖೆಯಿಂದ 1.51 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮೀನುಗಾರಿಕಾ ಬಂದರಿನ ಆಕ್ಷನ್ ಹಾಲ್ ಅಭಿವೃದ್ಧಿ ಕಾಮಗಾರಿಗಳಿಗೆ 10.50 ಲಕ್ಷ, ಹಳೆ ಮೀನುಗಾರಿಕಾ ಬಂದರಿನ ಉತ್ತರ ದಕ್ಕೆಯ ಬಳಿ ಕುಸಿದ‌ತಡೆಗೋಡೆ ಅಭಿವೃದ್ಧಿ 15 ಲಕ್ಷ, ಹಳೇ ಮೀನುಗಾರಿಕಾ ಬಂದರಿನ ಉತ್ತರ ದಕ್ಕೆಯ ವಾರ್ಫ್ ನ ಹಾರ್ಡ್ ಸರ್ಫೆಸಿಂಗ್ ದುರಸ್ತಿ ಕಾಮಗಾರಿ 5 ಲಕ್ಷ, ಮೀನುಗಾರಿಕಾ ಬಂದರಿನ ಉಪನಿರ್ದೇಶಕರ ಕಚೇರಿಯಿಂದ ಸಹಾಯಕ ನಿರ್ದೇಶಕರ ಕಚೇರಿ ವರೆಗೆ ಆರ್.ಸಿ.ಸಿ ಚರಂಡಿ ನಿರ್ಮಾಣ 5 ಲಕ್ಷ, ಮೀನುಗಾರಿಕಾ ಬಂದರಿನ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದ ವಾರ್ಫ್ ಕಾಂಕ್ರೀಟೀಕರಣ 5 ಲಕ್ಷ, ಮೀನುಗಾರಿಕಾ ಬಂದರಿನ ಯಾಂತ್ರಿಕ ಮೀನುಗಾರರ ಸಂಘದ ದಕ್ಷಿಣ ವಾರ್ಫ್ ಕಾಂಕ್ರೀಟೀಕರಣ 5 ಲಕ್ಷ, ಮೀನುಗಾರಿಕಾ ಬಂದರಿನ ಹರಾಜು ಮಳಿಗೆಯ ಉತ್ತರದ ವಾರ್ಫ್ ಕಾಂಕ್ರೀಟೀಕರಣ 5 ಲಕ್ಷ, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅವರಣದಲ್ಲಿ ಅಭಿವೃದ್ಧಿ ಹಾಗೂ ಉಪ ನಿರ್ದೇಶಕರ ಕಚೇರಿ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ 1.5 ಲಕ್ಷ, ಹಳೇ ಬಂದರಿನ ಬಿ.ಎಂ.ಫೆರ್ರಿ ಯಿಂದ ಬೆಂಗ್ರೆ (ಕಸಬಾ) ವರೆಗೆ ಹೂಳೆತ್ತುವ ಕಾಮಗಾರಿ 99.50 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಿಂದ 23 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ರೊಸಾರಿಯೋ ಸೈಂಟ್ ಕ್ರಿಸ್ಟೋಫರ್ ಹಾಸ್ಟೆಲ್ ಮುಂಬಾಗ ಇರುವ ರಸ್ತೆ ಮತ್ತು ಅಡ್ಡರಸ್ತೆಗಳ ಅಭಿವೃದ್ಧಿಗೆ ಅದನ್ನು ವಿನಿಯೋಗಿಸಲಾಗುವುದು.

ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ 06.01 ಲಕ್ಷ ಬಿಡುಗಡೆಗೊಳಿಸಿದ್ದು ಕಲ್ಸಂಕ ದೈವರಾಜ ಭಗವಾನ್ ಬಬ್ಬುಸ್ವಾಮಿ ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 16 ಲಕ್ಷ ನೀಡಿದ್ದು, ಅದರಲ್ಲಿ ಕಲ್ಸಂಕ ದೈವರಾಜ ಭಗವಾನ್ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಗ್ಯಾಲರಿ ನಿರ್ಮಾಣ 6 ಲಕ್ಷ, ಪಾಂಡೇಶ್ವರ ಶಿವಸೇವಾ ಸಮಿತಿ ಕಟ್ಟಡದ ಬಳಿ ಅಭಿವೃದ್ಧಿ ಕಾಮಗಾರಿ 5 ಲಕ್ಷ, ನೀರೇಶ್ವಾಲ್ಯ ಸೋಮನಾಥ ದೇವಸ್ಥಾನ, ಗೂಡ್ ಶೆಡ್ ರಸ್ತೆ ಅಭಿವೃದ್ಧಿಗೆ 5 ಲಕ್ಷ ಮೀಸಲಿಡಲಾಗಿದೆ.

ಬಂದರು ಇಲಾಖೆಯಿಂದ 1.59 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಹಳೇ ಬಂದರಿನ ಉತ್ತರ ಧಕ್ಕೆಯ ಕುಸಿದ ಭಾಗಗಳಲ್ಲಿ ಆರ್.ಸಿ.ಸಿ ತಡೆಗೋಡೆ ನಿರ್ಮಾಣ 50 ಲಕ್ಷ, ಹಳೇ ಬಂದರಿನ ಉತ್ತರ ಧಕ್ಕೆಯ ಹೈಮಾಸ್ಟ್ ಕಂಬಗಳಿಗೆ ಎಲ್.ಇ.ಡಿ ಲೈಟ್ ಗಳನ್ನು ಅಳವಡಿಸುವುದು 4.85 ಲಕ್ಷ, ಹಳೇ ಬಂದರಿನ ದಕ್ಷಿಣ ಧಕ್ಕೆಯ ಹೈಮಾಸ್ಟ್ ಕಂಬಗಳಿಗೆ ಎಲ್.ಇ.ಡಿ ಲೈಟ್ ಅಳವಡಿಕೆ 5 ಲಕ್ಷ, ಹಳೇ ಬಂದರಿನ 2ನೇ ಹಂತದ ಮುಖ್ಯ ದ್ವಾರದ ಬಳಿ ಸಂಪರ್ಕ ಚರಂಡಿ ನಿರ್ಮಾಣ ಕಾಮಗಾರಿ 2.30 ಲಕ್ಷ, ಹಳೇ ಬಂದರಿನ ಬೆಂಗ್ರೆ ಬದಿಯಲ್ಲಿ ಡೈಡಾಕ್ ನಿರ್ಮಾಣ ಕಾಮಗಾರಿಯ ವಿಸ್ತ್ರತ ಯೋಜನಾ ವರದಿ ತಯಾರಿಸುವ ಕಾಮಗಾರಿ 10 ಲಕ್ಷ, ಹಳೇ ಬಂದರಿನ ದಕ್ಷಿಣ ಧಕ್ಕೆಯಲ್ಲಿರುವ “ಎ” ಗೋದಾಮಿನ ಮೇಲ್ಛಾವಣಿಗೆ ಗ್ಯಾಲ್ ವಾಲ್ಯುಮ್ ಶೀಟ್ ಅಳವಡಿಸುವುದು ಹಾಗೂ ನೆಲಹಾಸಿನ ಅಭಿವೃದ್ಧಿ ಕಾಮಗಾರಿ 49.50 ಲಕ್ಷ, ಹಳೇ ಬಂದರಿನ ದಕ್ಷಿಣ ಧಕ್ಕೆಯ “ಎ” ಗೋದಾಮಿನ ಬಳಿಯಿರುವ ರೆಸ್ಟ್ ರೂಮ್,ಪಂಪ್ ಹೌಸ್, ಹಾಗೂ ಧಕ್ಕೆಯ ಹಾರ್ಡ್ ಸರ್ಫೆಸಿಂಗ್ ದುರಸ್ತಿ 16 ಲಕ್ಷ, ಹಳೇ ಬಂದರಿನ ಉತ್ತರ ಧಕ್ಕೆಯಲ್ಲಿ ಲಕ್ಷದ್ವೀಪ ಸಮೂಹಕ್ಕೆ ನೀಡಿದ ಕೈಾರ್ ಮೊನೊಪೊಲಿ ಕಟ್ಟಡ ಅಭಿವೃದ್ಧಿಪಡಿಸುವ‌ ಕಾಮಗಾರಿ 13 ಲಕ್ಷ, ಹಳೇ ಬಂದರಿನ ಉತ್ತರ ಧಕ್ಕೆಯಲ್ಲಿ ಆರ್.ಸಿ.ಸಿ ಹ್ಯೂಮ್ ಪೈಪ್ ಚರಂಡಿ ನಿರ್ಮಾಣ 5 ಲಕ್ಷ, ಬಂದರು ಕಚೇರಿ ಸಿಸಿ ಟಿವಿ ಕ್ಯಾಮರಾ ಕಂಟ್ರೋಲ್ ರೂಮಿನಲ್ಲಿ ಪಿಠೋಪಕರಣ ಒದಗಿಸುವ ಕಾಮಗಾರಿ 3.5 ಲಕ್ಷ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.