ಕರಾವಳಿ

ಬೆಂಗ್ರೆ ವಾರ್ಡ್ ಅಭಿವೃದ್ಧಿಗೆ 4.03 ಕೋಟಿ ಅನುದಾನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.30 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತ ಕೊನೆಗೊಂಡ ನಂತರ ಜನರ ಬೇಡಿಯನುಸಾರವಾಗಿ ವಿವಿಧ ಇಲಾಖೆಗಳಿಂದ ವಿಶೇಷ ಅನುದಾನ ಒದಗಿಸಲಾಗಿದೆ. ಅಲ್ಪ ಸಂಖ್ಯಾತ ಅಭಿವೃದ್ಧಿ ಅನುದಾನದಡಿ 35 ಲಕ್ಷ ಬಿಡುಗಡೆಯಾಗಿದ್ದು ಕಸಬಾ ಬೆಂಗ್ರೆಯಲ್ಲಿ ಆರ್.ಸಿ.ಸಿ ಮುಚ್ಚು ಚರಂಡಿ ನಿರ್ಮಾಣ 10 ಲಕ್ಷ, ಬದ್ರಿಯಾ ಮಸೀದಿಗೆ ಹೋಗುವ‌ರಸ್ತೆ ಅಭಿವೃದ್ಧಿಗೆ 5 ಲಕ್ಷ, ಬೆಂಗ್ರೆ ರಹಮತ್ ಅಂಗಡಿಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ, ಬೆಂಗ್ರೆ ಬಳಿ ಚರಂಡಿ ನಿರ್ಮಾಣ ಕಾಮಗಾರಿಗೆ 10 ಮೀಸಲಿಡಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.

ಮಳೆಹಾನಿ ಅನುದಾನದಲ್ಲಿ 20 ಲಕ್ಷ ಬಿಡುಗಡೆಗೊಳಿಸಲಾಗಿದೆ. ಬೆಂಗ್ರೆ ವಿ.ವಿ ಸದನಕ್ಕೆ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ, ಕಸಬಾ ಬೆಂಗ್ರೆ ಬಳಿ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ಮೀಸಲಿಡಲಾಗಿದೆ.

ಮಲೆನಾಡು ಅಭಿವೃದ್ಧಿ ನಿಗಮದಿಂದ 6 ಬಿಡುಗಡೆಗೊಳಿಸಿದ್ದು ಸ್ಯಾಂಡ್ ಪಿಟ್ ಬಳಿ ಅಂಗನವಾಡಿಯ ಮುಂದುವರೆದ ಕಾಮಗಾರಿಗೆ ಮೀಸಲಿಡಲಾಗಿದೆ ಎಂದಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಬೆಂಗ್ರೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ಅನುದಾನ ನೀಡಲಾಗಿದೆ. ಹಾಗೂ ತೋಟ ಬೆಂಗ್ರೆಯಲ್ಲಿ ನಾಡದೋಣಿ ತಂಗುದಾಣ ನಿರ್ಮಾಣಕ್ಕೆ ಮೀನುಗಾರಿಕಾ ಇಲಾಖೆಯಿಂದ 2019-20 ನೇ ಸಾಲಿನಲ್ಲಿ 3.37 ಕೋಟಿ ಬಿಡುಗಡೆಯಾಗಿದ್ದು ಈಗಾಗಲೇ ಟೆಂಡರ್ ಹಂತದಲ್ಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.