ಮಂಗಳೂರು, ಜನವರಿ.12: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀ. ಸುದರ್ಶನ ಎಂ ಅಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಸಂಘಟನಾ ಪರ್ವದ ಕಾರ್ಯವು ಇಡೀ ದೇಶಾದ್ಯಂತ ನಡೆಯುತ್ತಿದ್ದು, ಈ ದಿನ(12.01.2020) ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯು ರಾಜ್ಯ ಚುನಾವಣಾ ಉಸ್ತುವಾರಿ ಶ್ರೀ ನಿರ್ಮಲ್ ಕುಮಾರ್ ಸುರಾಣ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಉದಯ ಕುಮಾರ್ ಶೆಟ್ಟಿಯವರು ನಡೆಸಿಕೊಟ್ಟಿರುತ್ತಾರೆ. ಜಿಲ್ಲೆಯ ನಿಕಟ ಪೂರ್ವ ಅಧ್ಯಕ್ಷರು ಶಾಸಕರುಗಳು, ವಿಭಾಗ ಪ್ರಭಾರಿ, ಸಹ ಪ್ರಭಾರಿ, ಚುನಾವಣಾ ವೀಕ್ಷಕರು, ನೂತನ ಮಂಡಲ ಅಧ್ಯಕ್ಷರುಗಳು ಇವರ ಸಮ್ಮುಖದಲ್ಲಿ ಸರ್ವಾನುಮತದಿಂದ ಶ್ರೀ. ಸುದರ್ಶನ ಎಂ ಇವರನ್ನು ಮುಂದಿನ ಅವದಿಗೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಶ್ರೀ ರಾಬೀನ್ ದೇವಯ್ಯ
ಕೊಡಗು: ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಸಂಬಂದ ಪಟ್ಟಂತೆ ಮಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಡುವುದರಿಂದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಸಹ ಮಂಗಳೂರು ಕಚೇರಿಯಲ್ಲಿ ರಾಜ್ಯದ ಸೂಚನೆಯ ಮೇರೆಗೆ ಉಸ್ತುವಾರಿಗಳಾದ ಶ್ರೀ.ನಿರ್ಮಲ್ ಕುಮಾರ್ ಸುರಾಣ ಮತ್ತು ಕೊಡಗು ಜಿಲ್ಲಾ ಚುನಾವಣಾ ಸಹಾಯಕ ಅಧಿಕಾರಿಯಾಗಿರುವ ರವಿಕಾಳಪ್ಪರವರು , ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ,ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ,, ಸುನೀಲ್ ಸುಬ್ರಮಣಿ, ಹಾಲಿ ಜಿಲ್ಲಾಧ್ಯಕ್ಷರಾದ ಭಾರತೀಶ್ ಮತ್ತಿತ್ತರ ಜಿಲ್ಲಾ ನಾಯಕರು ಹಾಗೂ ನೂತನ ಮಂಡಲ ಅಧ್ಯಕ್ಷರ ಸಮಕ್ಷಮದಲ್ಲಿ ಸರ್ವಾನುಮತದಿಂದ ಶ್ರೀ.ರಾಬೀನ್ ದೇವಯ್ಯ ಇವರನ್ನು ಮುಂದಿನ ಅವದಿಗೆ ಕೊಡಗು ಜಿಲ್ಲೆಯ ನೂತನ ಜಿಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.



Comments are closed.