ಕರಾವಳಿ

ಮಂಗಳೂರು ; ಹೊಸ ವರ್ಷಾಚರಣೆ ಸಂದರ್ಭ ಹೆಚ್ಚಿನ ಅನಾಹುತ ತಪ್ಪಿಸಲು 108 ಅರೋಗ್ಯ ಕವಚ ಆಂಬುಲೆನ್ಸ್ ಸೇವೆ

Pinterest LinkedIn Tumblr

ಹೊಸ ವರ್ಷಾಚರಣೆ ಹಿನ್ನೆಲೆ: ಅಪಘಾತಗಳಿಂದ ಉಂಟಾಗುವ ಜೀವಹಾನಿ ತಪ್ಪಿಸಲು 108 ಅರೋಗ್ಯ ಕವಚ ಆಂಬುಲೆನ್ಸ್ ಸೇವೆ

ಮಂಗಳೂರು ಡಿಸೆಂಬರ್ 31 : ಹೊಸ ವರ್ಷ ಆಚರಣೆ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವಹಾನಿ ಯನ್ನು ತಡೆಯುವ ದೃಷ್ಟಿಯಿಂದ 108 ಅರೋಗ್ಯ ಕವಚ ಆಂಬುಲೆನ್ಸ್ ಸೇವೆಯನ್ನು ಜಿಲ್ಲೆಯಾದ್ಯಂತ ಸನ್ನದ್ಧಗೊಳಿಸಲಾಗಿದೆ.

ಸಾಮಾನ್ಯ ದಿನಗಳಿಗಿಂತ ಹೊಸ ವರ್ಷಾಚರಣೆ ಸಂದರ್ಭದಲ್ಲಿ 30ರಿಂದ 35ರಷ್ಟು ಅಪಘಾತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆ ಹಾಗೂ ಅಪಘಾತ ತುರ್ತುಪರಿಸ್ಥಿತಿಯಲ್ಲಿ 108 ಸಂಖ್ಯೆಗೆ ಡಯಲ್ ಮಾಡಿ ಆಂಬುಲನ್ಸ್ ಸೇವೆ ಪಡೆಯಲು ಅಗತ್ಯ ಕ್ರಮ ವಹಿಸಲಾಗಿದೆ ಜಿಲ್ಲೆಯಲ್ಲಿ ಒಟ್ಟು 28 ಆಂಬುಲೆನ್ಸ್ ಹಾಗೂ 2 ಬೈಕ್ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Comments are closed.