ಕರಾವಳಿ

ಪೇಜಾವರ಼ ಶ್ರೀ ಮುಖ್ಯಪ್ರಾಣಐಕ್ಯ : ಮಂಗಳೂರು ಬಿಷಪ್ ತೀವ್ರ ಸಂತಾಪ

Pinterest LinkedIn Tumblr

ಮಂಗಳೂರು : ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ರವಿವಾರ ಮುಖ್ಯಪ್ರಾಣಐಕ್ಯ ಸೇರಿದ್ದು, ಶ್ರೀಗಳ ಅಗಲಿಕೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಮುಖಂಡರಾಗಿದ್ದು, ಸಮಾಜದ ಉನ್ನತಿಗಾಗಿ ಹಗಲಿರುಲು ಸೇವೆಸಲ್ಲಿಸಿ, ಪರರಿಗೆ ಒಳಿತು ಮಾಡುವ ದ್ಯೇಯದೊಂದಿಗೆ ಜೀವಿಸಿ, ನಮ್ಮನ್ನಗಲಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಅವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತೇವೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ತಿಳಿಸಿದ್ದಾರೆ.

Comments are closed.