ಕರಾವಳಿ

ಅಯೋಧ್ಯೆಯಲ್ಲಿ ಶೀಘ್ರವೇ ರಾಮಮಂದಿರ ನಿರ್ಮಾಣವಾಗಿ ಶ್ರದ್ಧಾ- ಭಕ್ತಿಯ ಕೇಂದ್ರವಾಗಿ ರೂಪುಗೊಳ್ಳಲಿ : ಡಾ.ಹೆಗ್ಗಡೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.27: “ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ಸಮಸ್ಯೆ ನಿವಾರಣೆಯಾಗಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣವಾಗಲಿ, ಜತೆಗೆ ಅದು ಶ್ರದ್ಧೆ ಹಾಗೂ ಭಕ್ತಿಯ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ನಗರದ ಸಂಘ ನಿಕೇತನದಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು. ಮತಾಂತರವನ್ನು ಉಲ್ಲೇಖಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆಯವರು, “ಹಿಂದೆಲ್ಲಾ ಬಡತನ,ಸಾಮಾಜಿ ಸಮಸ್ಯೆಗಳ ಕಾರಣಕ್ಕಾಗಿ ಅನುಕಂಪದ ನೆಲೆಯಲ್ಲಿ ಮತಾಂತರ ನಡೆಯುತ್ತಿತ್ತು, ಇತರೆ ಧರ್ಮದವರು ಮನೆ ಮನೆಗಳಿಗೆ ತೆರಳಿ ಸಮಸ್ಯೆಗೊಳದಾವರನ್ನು ತಮ್ಮ ಧರ್ಮಗಳಿಗೆ ಮತಾಂತರ ನಡೆಸುವ ಕೆಲಸ ನಡೆಯುತ್ತಿತ್ತು, ಆದರೆ ಈಗ ಗ್ರಾಮೀಣ ವಿಕಾಸ ಯೋಜನೆಗಳು ಸಮಾಜದಲ್ಲಿನ ಬಡವರ್ಗಕ್ಕೆ ಆರ್ಥಿಕ ಸಬಲತೆಯನ್ನು ನೀಡಿರುವುದರಿಂದ ಅನುಕಂಪದ ನೆಲೆಯಲ್ಲಿ ಮತಾಂತರ ಸಾಧ್ಯವಿಲ್ಲ” ಎಂದು ಹೇಳಿದರು.

50 ವರ್ಷಗಳ ಹಿಂದೆ ಶಿಕ್ಷಣಕ್ಕಾಗಿ ಎಲ್ಲರೂ ಕಾನ್ವೆಂಟ್‌ಗಳಿಗೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಈಗ ಹಿಂದೂ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದಲ್ಲದೆ ವೈದ್ಯಕೀಯ ಸೇವೆಯಲ್ಲಿಯೂ ಹಿಂದೂ ಸಂಸ್ಥೆಗಳು ಮುಂದೆ ಸಾಗಿವೆ. ಹಾಗಾಗಿ ಸೇವೆ ಹಿಂದೂಗಳ ಪ್ರಮುಖ ಗುರಿಯಾಗಬೇಕು. ಶಿಕ್ಷಣ, ಆರೋಗ್ಯದೊಂದಿಗೆ ಸಂಸ್ಕಾರಕ್ಕೆ ಹೆಚ್ಚಿನ ಒತ್ತು ನೀಬೇಕು ಎಂದು ಹೆಗ್ಗಡೆಯವರು ಹೇಳಿದರು.

ಉಡುಪಿ ಪೇಜಾವರದ ಕಿರಿಯ ವಿಶ್ವ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು.ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೈಠಕ್‌ನಲ್ಲಿ ಚರ್ಚೆಯಾಗಬೇಕಿರುವ ವಿಷಯಗಳ ಬಗ್ಗೆ ಗಮನ ಸೆಳೆದರು.

ಸಮಾರಂಭದಲ್ಲಿ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಚೌಧುರಿ, ಉಪಾಧ್ಯಕ್ಷರಾದ ಜೀವೇಶ್ವರ ಮಿಶ್ರಾ, ಬೀನಾ ಭಟ್, ಓಂ ಪ್ರಕಾಶ್ ಶಿಂಧೆ, ಜಗನ್ನಾಥ ಶಾಹಿ, ಚಂಪತ್ ರಾಯ್, ಮುಖ್ಯ ಟ್ರಸ್ಟಿ ರಮೇಶ್ ಮೋದಿ, ಕೋಶಾಧಿಕಾರಿ ಗೋಪಾಲ್ ಜುಂಜನ್‌ವಾಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ, ಸಂಘಟನಾ ಕಾರ್ಯದರ್ಶಿ ವಿನಾಯಕ ರಾವ್ ದೇಶಪಾಂಡೆ, ದಕ್ಷಿಣ ಕರ್ನಾಟಕ ಅಧ್ಯಕ್ಷರಾದ ವಿಜಯಲಕ್ಷಿ ಉಪಸ್ಥಿತರಿದ್ದರು.

ವಿಎಚ್‌ಪಿ ದಕ್ಷಿಣ ಕರ್ನಾಟಕ ಕಾರ್ಯಾಧ್ಯಕ್ಷ ಪ್ರೋ.ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಬಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್ ವಂದಿಸಿದರು.

Comments are closed.