ಕರಾವಳಿ

ಪ್ರಕೃತಿ ವಿಕೋಪ : ನಷ್ಟಕ್ಕೆ ಒಳಗಾದ ಮಹಿಳೆಗೆ ಚೆಕ್ ವಿತರಣೆ

Pinterest LinkedIn Tumblr

ಮಂಗಳೂರು : ಕಳೆದ ಬಾರಿ ಉಂಟಾದ ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಒಳಗಾದ ಪದವು 36 ವಾರ್ಡಿನ ರತ್ನ ಅವರಿಗೆ 60 ಸಾವಿರ ರೂಪಾಯಿ ಪರಿಹಾರ ಧನ ಚೆಕ್ಕನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ವಿತರಿಸಿದರು.

ಮಂಗಳೂರು ನಗರ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ಬಹಳಷ್ಟು ನಷ್ಟ ಸಂಭವಿಸಿದೆ. ಕುಲಶೇಖರ ಕೋಟಿಮುರ ನಿವಾಸಿ ರತ್ನ ಅವರ ಮನೆ ಕೂಡ ಪ್ರಕೃತಿ ವಿಕೋಪದ ಸಂಧರ್ಭದಲ್ಲಿ ಬಹುತೇಕ ಹಾನಿಯಾಗಿತ್ತು. ಹಾಗಾಗಿ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ನೀಡುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಸರಕಾರ ಆಡಳಿತ ವಹಿಸಿಕೊಂಡ ನಂತರ ಪ್ರಕೃತಿ ವಿಕೋಪದಲ್ಲಿ ಹಾನಿಗೊಳಪಟ್ಟ ಪ್ರತಿ ಮನೆಗೂ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಕಾಳಜಿ ವಹಿಸಿ ಸರಕಾರದಿಂದ ಹೆಚ್ಚಿನ ಸಹಕಾರ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಈಗಾಗಲೇ ಬಹಳಷ್ಟು ಜನರಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದಿದ್ದಾರೆ

ಈ ಸಂಧರ್ಭದಲ್ಲಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಶೈಲೇಶ್ ಶೆಟ್ಟಿ, ವನಿತಾ ಪ್ರಸಾದ್, ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರಾದ ಸುಜನ್ ದಾಸ್, ಪುರುಷೋತ್ತಮ ಭಟ್ ಮುಂತಾದವರು ಉಪಸ್ಥಿತರಿದ್ದರು.

Comments are closed.