ಕರಾವಳಿ

ಕೋಟಿ ಬೆಲೆ ಬಾಳುವ ವಕ್ಫ್ ಸೊತ್ತು ಮಾರಾಟ ಆರೋಪ : ತಪ್ಪಿತಸ್ಥರ ವಿರುಧ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.18 : ವಕ್ಫ್ ಸೊತ್ತುಗಳ ಹಿತರಕ್ಷಣಾ ಸಮಿತಿ, ಉಳ್ಳಾಲ ಇದರ ವತಿಯಿಂದ ವಕ್ಫ್ ಸೊತ್ತನ್ನು ಮಾರಾಟ ಮಾಡಿದ ಆರೋಪಿಗಳ ವಿರುಧ್ದ ಬೃಹತ್ ಪ್ರತಿಭಟನಾ ಸಭೆ ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯಿತು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ವಕ್ಫ್ ಸೊತ್ತುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಿಯಾಝ್ ಅಳೇಕಲ ಅವರು, ಕರ್ನಾಟಕ ರಾಜ್ಯ ಪತ್ರದಲ್ಲಿ ಗೆಜೆಟ್ ನೋಟಿಫಿಕೇಶನ್ ಆದ ವಕ್ಫ್ ಇಲಾಖೆಯಲ್ಲಿ ನೋಂದಾಯಿತವಾದ, ಇತಿಹಾಸ ಪ್ರಸಿಧ್ದ ಉಳ್ಳಾಲ ದರ್ಗಾಕ್ಕೆ ಸೇರಿದ ಮಂಗಳೂರು ಪಂಪ್ವೆಲ್ ಬಳಿಯಿರುವ ಕೋಟಿ ಬೆಲೆ ಬಾಳುವ ಜಾಗ ಮತ್ತು ಅದರಲ್ಲಿರುವ ಕಟ್ಟಡವನ್ನು (ಸರ್ವೇ ನಂ: 24/3AP25 4.5 ಸೆಂಟ್ಸ್ ) ವಕ್ಫ್ ಇಲಾಖೆಯ ಅನುಮತಿಯಿಲ್ಲದೆ ಜುಜುಬಿ ಹಣಕ್ಕೆ ಮಾರಾಟ ಮಾಡಿ, ಹಣವನ್ನು ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರು.

ಉಳ್ಳಾಲ ದರ್ಗಾದ ಅನಧಿಕೃತ ಆಡಳಿತ ಸಮಿತಿಯನ್ನು ಸರಕಾರವು ಈಗಾಗಲೇ ಬರ್ಖಾಸ್ತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಮಾನ್ಯ ಆಡಳಿತಾಧಿಕಾರಿಯವರು ಹಾಗೂ ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ, ವಕ್ಫ್ ಸೊತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುಧ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

Comments are closed.